BREAKING
ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ರಾಜ್ಯೋತ್ಸವ ಸಂಭ್ರಮ

ಕನ್ನಡತನ ಬಳಸಿ ಬದುಕು ಕಟ್ಟಿಕೊಳೋಣ ಈ ರಾಜ್ಯೋತ್ಸವ ಒಂದು ದಿನದ ಹಬ್ಬವನ್ನು ದಿನ ನಿತ್ಯದ ಹಬ್ಬ ಎಂದು ಸುನಾಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ನರೇಂದ್ರ ಕುಮಾರ್ ಎಚ್ಎಸ್ ಹೇಳಿದರು.

 ಅವರು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಎಂಜಿಎಂ ಕಾಲೇಜಿನ ಹತ್ತಿರವಿರುವ ರಿಕ್ಷಾ ನಿಲ್ದಾಣದಲ್ಲಿ ನಡೆದ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಸ್ತಾಂತರಿಸಿ ಮಾತನಾಡಿದರು.

 ಕನ್ನಡ ಭಾಷೆಯಲ್ಲ ಅದು ನಮ್ಮ ಜೀವನದ ಪದ್ಧತಿ ಎಂದರು.

 ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕಿನ ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಮಡಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಕಳೆದ ಐದು ವರ್ಷದಲ್ಲಿ ಮಾಡಿದ ಸಾಧನೆ ಅಪೂವ೯ ಕನ್ನಡ ತಾಯಿ ಭಾಷೆ ಇತರ ಭಾಷೆಗಳನ್ನು ಬೆಳೆಸುತ್ತಿದೆ ಕನ್ನಡವನ್ನು ಬೆಳೆಸಬೇಕಾದರೆ ನಾವೆಲ್ಲರೂ ಅದನ್ನು ಬಳಸಬೇಕಾಗಿದೆ ಎಂದರು.

 ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾದ೯ನ್, ಪದಾಧಿಕಾರಿಗಳಾದ ದೀಪ ಚಂದ್ರಕಾಂತ್, ಸಿದ್ದಬಸಯ್ಯಸ್ವಾಮಿ ಚಿಕ್ಕಮಠ, ಸುಶಾಂತ್ ಕೆರೆ ಮಠ, ಅನಿತಾ ಡಿಸೋಜ, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಉಪಾಧ್ಯಕ್ಷ ಇಮ್ತಿಯಾಜ್, ಮನೋಜ್ ಕಡಬ, ಶೆಲಿ೯ ಮನೋಜ್, ಅನಿತಾ ಸಿಕ್ತ್ವೆರಾ, ಸುಮಿತ್ರ ಕೆರೆ ಮಠ, ಮುಂತಾದವರು ಉಪಸ್ಥಿತರಿದ್ದರು.

 ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕ ಅಧ್ಯಕ್ಷ ರವಿರಾಜ್ ಹೆಚ್ ಪಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು ವಂದಿಸಿದರು.

ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!