Header Ads Widget

ಹೆಂಡತಿ ಜೊತೆ ಚಕ್ಕಂದ : ಯುವಕನ ಮರ್ಮಾಂಗವನ್ನೇ ಕತ್ತರಿಸಿದ ಪತಿ

 

ಬೀದರ್ : ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಪತ್ನಿಯ ಜತೆ ಅನೈತಿಕ ಸಂಬಂಧ‌ ಹೊಂದಿದ್ದ ಯುವಕನ ಮರ್ಮಾಂಗ ಕತ್ತರಿಸಿದ ಘಟನೆ ನಡೆದಿದೆ.

ಬಂಬುಳಗಿ ಗ್ರಾಮದ‌ ಸುನೀಲ್ (28) ಎಂಬಾತ ಹಲ್ಲೆಗೊಳಗಾಗಿ‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾ ಗಿದ್ದಾನೆ.

ರಾತ್ರಿ ಮಹಿಳೆಯ ಜತೆ ಆಕೆಯ ಮನೆಯಲ್ಲಿ ಸಿಕ್ಕಿ ಬಿದ್ದಿರುವ ಯುವಕನಿಗೆ‌ ಪತಿ ರಾತ್ರಿಯಿಡೀ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾನೆ.

ಬಳಿಕ ಮರ್ಮಾಂಗವನ್ನು ಕತ್ತರಿ ಮೂಲಕ ಕತ್ತರಿಸಿದ್ದಾನೆ ಎನ್ನಲಾಗಿದೆ.

ಚಿಟಗುಪ್ಪ ಪೊಲೀಸರು ಕೃತ್ಯ ಎಸಗಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ..