ಉಡುಪಿ : ನಾಪತ್ತೆಯಾಗಿದ್ದ ಸಂಸ್ಕೃತ ಉಪನ್ಯಾಸಕರ ಶವ ಬಾವಿಯಲ್ಲಿ ಪತ್ತೆ!

ನಾಪತ್ತೆಯಾಗಿದ್ದ ಉಪನ್ಯಾಸಕರೊಬ್ಬರ ಶವವು ಮನೆ‌ ವಠಾರದಲ್ಲಿದ್ದ ಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ. ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಉಪನ್ಯಾಸಕ ಗಣಪತಿ ಭಟ್ (55) ಶಿರಸಿ ಮೂಲದವರಾಗಿದ್ದು, ಅವಿವಾಹಿತರಾಗಿದ್ದಾರೆ. ನಗರದ ಸಂಸ್ಕೃತ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂ.ಜಿ.ಎಂ ಕಾಲೇಜಿನ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೃತರು ನಾಪತ್ತೆಯಾದ ಬಗ್ಗೆ ನಗರ ಪೋಲಿಸ್ ಠಾಣೆಯ‌ಲ್ಲಿ ಪ್ರಕರಣ ದಾಖಲಾಗಿತ್ತು.

ಅಗ್ನಿ ಶಾಮಕ ದಳದ ನೆರವಿನಿಂದ ಶವವನ್ನು ಮೇಲಕೆತ್ತಾಲಾಯಿತು. ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ, ಗಣೇಶ ಡಿ,ತನಿಖಾ ಸಹಾಯಕಿ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ‌ ಒಳಕಾಡು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು