ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಇಂದು ಸಂಜೆ ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಜರುಗಿತು. ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಗೆ ಉಸ್ತುವಾರಿ ಯಾಗಿರುವ ಚಂದ್ರಕಲಾ ರಾವ್ ಅವರು ಈ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ "ನಮ್ಮ ಪಕ್ಷದ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯಸರ್ಕಾರವು ಮಹಿಳೆಯರಿಗಾಗಿ ಅನೇಕ ಸವಲತ್ತುಗಳನ್ನು ನೀಡಿರುವುದರಿಂದ ನಾವು ಹೆಚ್ಚು ಹೆಚ್ಚು ಮಹಿಳೆಯರನ್ನು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಈ ಸದಸ್ಯತ್ವ ಅಭಿಯಾನ ಉಡುಪಿ ಜಿಲ್ಲೆಯ ಪ್ರತೀಯೊಂದು ಬ್ಲಾಕ್ ಗಳಲ್ಲಿಯೂ ಚುರುಕುಗೊಳ್ಳಬೇಕು ಎಂದು ನುಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀರಮೇಶ್ ಕಾಂಚನ್, ಯುವ ನಾಯಕ ಶ್ರೀ ಪ್ರಸಾದ್ ರಾಜ್ ಕಾಂಚನ್ ಮುಂತಾದವರು ಮಾತನಾಡಿ ಮಹಿಳಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ತಾವು ಸರ್ವ ರೀತಿಯಲ್ಲೂ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಕಾರ್ಕಳ ಬ್ಲಾಕ್ ಅಧ್ಯಕ್ಷರಾದ ಅನಿತಾ ಡಿ'ಸೋಜಾ,ಉಡುಪಿ ಬ್ಲಾಕ್ ಅಧ್ಯಕ್ಷರಾದ ಮಮತಾ ಶೆಟ್ಟಿ, ಬೈಂದೂರು ಬ್ಲಾಕ್ ನ ನಿಯೋಜಿತ ಅಧ್ಯಕ್ಷರಾದ ಸೂರ್ಯಕಾಂತಿ,ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳಾದ ಜ್ಯೋತಿ ಹೆಬ್ಬಾರ್ ಮೀನಾಕ್ಷಿ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ಕಾಪು ಬ್ಲಾಕ್ ಅಧ್ಯಕ್ಷರಾದ ಶಾಂತಲತಾ ಶೆಟ್ಟಿ ಅವರು ಸದಸ್ಯತ್ವ ಅಭಿಯಾನದಲ್ಲಿ ತೋರಿಸಿದ ಅತ್ಯುತ್ತಮ ನಿರ್ವಹಣೆಗೆ ಅವರನ್ನು ಉಸ್ತುವಾರಿಯವರು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸಿ ಅಗ್ರ ಸ್ಥಾನವನ್ನು ಪಡೆಯುವ ಬ್ಲಾಕ್ ಗಳಿಗೆ ಬಹುಮಾನವನ್ನೂ ಘೋಷಿಸಲಾಯಿತು.