ತೋನ್ಸೆ ವಲಯ ಬ್ರಾಹ್ಮಣ ಸಮಿತಿಯ ವತಿಯಿಂದ ಧಾರ್ಮಿಕ ಕಾರ್ಯಕ್ರಮ

ತೋನ್ಸೆ ವಲಯ ಬ್ರಾಹ್ಮಣ ಸಮಿತಿಯ ಧಾರ್ಮಿಕ ಕಾರ್ಯಕ್ರಮವು ದಿನಾಂಕ 28-12-2025 ಭಾನುವಾರ ಮೂಡುಕುದ್ರುವಿನ ಕನ್ನಾರುಕುದ್ರು ಶ್ರೀ ದುರ್ಗಾಪರಮೇಶ್ವರಿ ಮಠದಲ್ಲಿ ನಡೆಯಿತು.

ವೈವಾಹಿಕ ಜೀವನದ 50 ಸಂವತ್ಸರಗಳನ್ನು ಪೂರೈಸಿದ ತೋನ್ಸೆ ವಲಯದ ಸದಸ್ಯರಾದ ಗೋಪಾಲಪುರದ ಶ್ರೀ ಮೋಹನ್ ರಾವ್ ಕೊರಡ್ಕಲ್, ಬಡಾನಿಡಿಯೂರಿನ ಶ್ರೀ ರಮಾನಂದ ರಾವ್ ಮತ್ತು ಮೂಡುಕುದ್ರು ಶ್ರೀ ರಮೇಶ್ ರಾವ್ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ. ರಾಜೇಶ್ ನಾವಡ ಮತ್ತು ಬಳಗ, ‘ಯಕ್ಷಗೀತಂ’ ಉಡುಪಿ ಇವರಿಂದ ‘ಕರ್ಣಾರ್ಜುನ’ ಪ್ರಸಂಗದ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

ತೋನ್ಸೆ ವಲಯದ ವಿಪ್ರರಿಂದ ಸಂಗ್ರಹಿಸಿದ ಗೋನಿಧಿಯನ್ನು ನಂಚಾರು ಕಾಮಧೇನು ಗೋಶಾಲೆ ಹಾಗೂ ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪದ್ಮನಾಭ ಉಪಾಧ್ಯಾಯ, ಗೌರವಾಧ್ಯಕ್ಷರಾದ ಓಕುಡೆ ಮಾಧವ ಭಟ್, ಮಾಧವ ಪಿ. ರಾವ್, ಕೋಶಾಧಿಕಾರಿ ಉಂಡಾರು ಮೇಧಾವಿ ಭಟ್, ಜೊತೆ ಕಾರ್ಯದರ್ಶಿಗಳಾದ ಹರಿಪ್ರಸಾದ್ ಭಟ್, ರಾಘವೇಂದ್ರ ಭಟ್ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಮೇಶ್ ಅಡಿಗರು ನಡೆಸಿಕೊಟ್ಟರು.

ಕಾರ್ಯದರ್ಶಿ ಮುರಲಿಕೃಷ್ಣ ರಾವ್ ಧನ್ಯವಾದ ಸಮರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು