ಸುಮಾರು ಮೂವತ್ನಾಲ್ಕು ವರುಷಗಳಿಂದ, ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟಿಕಲ್ ಮೈಂಟೆನೆನ್ ವಿಭಾಗದಲ್ಲಿ ಟೆಕ್ನಿಷಿಯನ್ ಆಗಿ ವೃತ್ತಿ ಜೀವನ ಆರಂಭಿಸಿ ಫೋರ್ ಮೆನ್ ಆಗಿ ನಿವೃತ್ತರಾದ ಶ್ರೀ ಗುರುಪ್ರಸಾದ್ ಎ ರವರ ಬೀಳ್ಕೊಡುಗೆ ಸಮಾರಂಭ ಇತೀಚಿಗೆ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನೆರವೇರಿತು. ಸಂಸ್ಥೆಯ ನಿರ್ದೇಶಕರಾದ ಕಮಾಂಡರ್ ಅನಿಲ್ ರಾಣ ಹಾಗೂ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್ ಜೊತೆಯಾಗಿ ಸನ್ಮಾನಿಸಿದರು.
ಅತಿಥಿಗಳಾಗಿ ಸಂಸ್ಥೆಯ ಮುಖ್ಯ ಭದ್ರತಾ ಅಧಿಕಾರಿ ಶ್ರೀ ಅಶೋಕ್ ರಾವ್ ಹಾಗೂ ವಿಭಾಗದ ಮುಖ್ಯಸ್ಥರಾದ ದೇವೇಂದ್ರ ನಾಯ್ಕ ಉಪಸ್ಥಿರಿದ್ದರು.
ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಅನಂತ ಪದ್ಮನಾಭ ಭಟ್ ಸ್ವಾಗತಿಸಿ, ಸುಮಿತ್ ಮಲ್ಪೆ ವಂದಿಸಿ, ಜಯರಾಮ್ ಶೆಟ್ಟಿಗಾರ್ ನಿರೂಪಿಸಿದರು.