ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಹಕಾರಿ ಸಂಘಟನೆಯಾದ ಸಹಕಾರ ಭಾರತಿಯ ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ದಿನೇಶ್ ಹೆಗ್ಡೆ ಆತ್ರಾಡಿ ರವರು ಆಯ್ಕೆಯಾಗಿ ದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಹಂಸ ಚೈತನ್ಯ ಸೊಸೈಟಿಯ ಅಧ್ಯಕ್ಷರಾದ ಸುದೀಶ್ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಸುಜಿತ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ದಿನ ಪಾಲ್ ಶೆಟ್ಟಿ, ಹರೀಶ್ ಕಲ್ಯ, ಅಶೋಕ್ ಪ್ರಭು ಬ್ರಹ್ಮಾವರ, ಭೋಜ ಪೂಜಾರಿ ಹೆಬ್ರಿ,ಆಶಾ ಹೆಗ್ಡೆ ಬ್ರಹ್ಮಾವರ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಪ್ರಸಾದ್ ಶೆಟ್ಟಿ ಕುತ್ಯಾರು ಮಹಿಳಾ ಪ್ರಮುಖರಾಗಿ ವಿಜೇತಾ ಪೈ ಅಜೆಕಾರು, ಸಹ ಪ್ರಮುಖರಾಗಿ ಸ್ಮಿತಾ ಶೆಟ್ಟಿ ನಿಯುಕ್ತಿ ಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್, ರೋಹಿತ್, ಸುದರ್ಶನ್. ರಾಜ್ಯ ಸಹಕಾರ ಭಾರತಿಯ ಪ್ರಧಾನ ಕಾರ್ಯ ದರ್ಶಿ ಶ್ರೀ ಮೋಹನದಾಸ ನಾಯಕ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಮಂಜುನಾಥ ,ನಿಕಟ ಪೂರ್ವ ಅಧ್ಯಕ್ಷ ಶ್ರೀ ಬೋಳಾ ಸದಾಶಿವ ಶೆಟ್ಟಿ ಯವರು ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು.
ಹಿರಿಯ ಸಹಕಾರಿ , ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಶ್ರೀ ಸತೀಶ್ಚಂದ್ರ ಎಸ್ ಆರ್ ರವರ ಮಾರ್ಗದರ್ಶನ ದಲ್ಲಿ ಈ ಕಾರ್ಯಕ್ರಮ ನಡೆಯಿತು.
0 ಕಾಮೆಂಟ್‌ಗಳು