ಲಕ್ಷ್ಮೀನಗರ : ಸರಕಾರಿ ಬಸ್ ಮತ್ತು ಬೈಕ್ ಡಿಕ್ಕಿ; ಸವಾರ ಮೃತ್ಯು!

ಉಡುಪಿ ಸಂತೆಕಟ್ಟೆ ಲಕ್ಷ್ಮೀ ನಗರ ರಸ್ತೆಯಲ್ಲಿ ವಾರದ ಹಿಂದೆ ಸರಕಾರಿ ಬಸ್ಸು ಮತ್ತು ದ್ವಿಚಕ್ರವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಮೊಹಮ್ಮದ್ ಝೈದ್ಅವರು ಉಡುಪಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾಗಿದ್ದಾರೆ. ಮೂಲತಃ ಹೆರ್ಗದ ಶೆಟ್ಟಿ ಬೆಟ್ಟು ನಿವಾಸಿಯಾಗಿದ್ದು ಅವರಿಗೆ 19 ವರ್ಷ ವಯಸ್ಸಾಗಿತ್ತು. ಮೃತರು ಒಬ್ಬ ಸಹೋದರ ಮತ್ತು ತಂದೆ ತಾಯಿಯನ್ನು ಅಗಲಿದ್ದಾರೆ. ಪಿಯುಸಿ ಮುಗಿಸಿ ಇನ್ನೇನು ಗಲ್ಫ್ ರಾಷ್ಟ್ರಕ್ಕೆ ಹೋಗಲು ಸಿದ್ಧತೆ ನಡೆಸಿದ್ದರು. ಇವರ ಆಕಸ್ಮಿಕ ನಿಧಾನವು ಕುಟುಂಬಕ್ಕೆ ಆಧಾರ ಸ್ತಂಭವಾಗಿರುವಾಗಲೇ ಅಪಘಾತದಲ್ಲಿ ಮೃತ್ಯು ಆಗಿರುವುದು ಕುಟುಂಬ ವರ್ಗದವರಿಗೆ. ತುಂಬಾಲಾರದ ನಷ್ಟವಾಗಿದೆ ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು