ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ಮತ್ತು ರೂ. 3,05,000/- ಮೊತ್ತದ ಸೊತ್ತು ವಶ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಪವನ್ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ವೆಂಕಟೇಶ್, ರಾಜೇಶ್, ಯತೀನ್ ಕುಮಾರ್, ಪ್ರಶಾಂತ್ ಮತ್ತು ಚರಣ್‌ರಾಜ್ ರವರನ್ನೊಳಗೊಂಡ ತಂಡವು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾಟೌನ್‌ಶಿಪ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹೊಂದಿದ್ದ ಆರೋಪಿ ಅಬ್ದುಲ್ ಜಬ್ಬಾರ್ @ ಜಬ್ಬಾರ್(27), ಕೇಳಾರ್ಕಳಬೆಟ್ಟು, ಉಡುಪಿ ದಸ್ತಗಿರಿಗೊಳಿಸಿ ಆತನಿಂದ 1) ಗಾಂಜಾ - 2 ಕೆ.ಜಿ 344 ಗ್ರಾಂ ತೂಕ, ಮೌಲ್ಯ ರೂ, 1,87,500/-,
2) APRILIA ಕಂಪೆನಿಯ ಸ್ಕೂಟರ್ -1 ಅಂದಾಜು ಮೌಲ್ಯ ರೂ, 1,00,000/-
3) ನಗದು ರೂ, 5.810/-
4) 1 ಮೊಬೈಲ್ ಪೋನ್. ಅಂದಾಜು ಮೌಲ್ಯ ರೂ. 10,000/-,
5) ವೆಯಿಂಗ್ ಮಿಶನ್-1, ರೂ, 1,000/-
6) ಚೂರಿ-1, ರೂ, 300/ಯನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದೆ. ಸ್ವಾದಿನ ಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ, 3.04,610/-. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2024 ಕಲಂ. 8(c), 20 (b) (ii), (B) NDPS Act 1985ರಂತೆ ಪ್ರಕರಣ ದಾಖಲಾಗಿರುತ್ತದೆ.