ಮ್ಯಾಜಿಕ್ ಜಗತ್ತಿಗೆ ನೀಡಿದ ಕೊಡುಗೆಗಾಗಿ ಸನ್ಮಾನಿಸಲ್ಪಟ್ಟ ಜಾದೂಗಾರರಲ್ಲಿ , "ಗಿಲಿಗಿಲಿ ಮ್ಯಾಜಿಕ್ " ಪ್ರೊ .ಶಂಕರ್ ಒಬ್ಬರು.
ಪ್ರೊ ಶಂಕರ್ ಜೊತೆಗೆ ಆಂಧ್ರಪ್ರದೇಶದ ಯಕ್ಷಿಣಿಗಾರ ಆಲಿ ಮತ್ತು ಕಲ್ಕತ್ತಾದ ರಜತ್ ಪ್ರಶಸ್ತಿ ಸ್ವೀಕರಿಸಿದರು
20 ಅಕ್ಟೋಬರ್ 2024 ರ ಭಾನುವಾರದಂದು, ಎರ್ನಾಕುಲಂನಲ್ಲಿ ನಡೆದ, ಮಲಯಾಳೀ ಮ್ಯಾಜಿಕ್ ಎಸೋಸಿಯೇಶನ್ ನವರು ಆಯೋಜಿಸಿದ ಸಮ್ಮೇಳನದಲ್ಲಿಜಾದೂ ಕಲಾ ಪೋಷಕ ಪೂನಾದ ಶ್ರೀ ಸಿ.ಕೆ. ಚೌಧರಿ ಅವರು , ತಮ್ಮ 80 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಮ್ಯಾಜಿಕ್ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ, ಸಿ.ಕೆ.ಚೌಧರಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.