ಮದರಸದ ಹಾಸ್ಟೇಲ್‌ನ ಬಾತ್‌ರೂಮ್‌ನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.12 ರಂದು ಶನಿವಾರ ಬ್ರಹ್ಮಾವರ ತಾಲೂಕಿನ ರಂಗನಕೇರಿಯ ಮಾಲಿಕ್ ದಿನಾರ್ ಮದರಸದ ಹಾಸ್ಟೆಲ್ನಲ್ಲಿ ಸಂಭವಿಸಿದೆ.
ಇಲ್ಲಿನ ವಾರಂಬಳ್ಳಿ ನಿವಾಸಿ ಮೊಹಮ್ಮದ್ ತೌಸಿಫ್ ಮತ್ತು ರಿಹಾನ ಬೇಗಂ ಅವರ ಮಗ ಮೊಹಮ್ಮದ್ ಜಹೀದ್ (12) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಹೀದ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡೆ ಹೇರಾಡಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ.
ರಜೆ ಹಿನ್ನೆಲೆ ಮನೆಗೆ ಬಂದಿದ್ದು, ಶುಕ್ರವಾರ ವಾಪಾಸು ಮದರಸಕ್ಕೆ ತೆರಳಿದ್ದ, ಶನಿವಾರ ರಾತ್ರಿ 9.00ಕ್ಕೆ ಊಟಕ್ಕೆ ಬಾರದೆ ಇರುವುದನ್ನು ಕಂಡು ಹುಡುಕಿದಾಗ ಬಾತ್‌ರೂಂನ ಸರಳಿಗೆ ಬೈರಸ್‌ನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ತಕ್ಷಣ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಅಲ್ಲಿ ಪರಿಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.