BREAKING
ಸುದ್ದಿ

ಬಿಕನಾಸಿ ಹರಿಪ್ರಸಾದ್~ ಜಿ. ವಾಸುದೇವ ಭಟ್ ವಾಗ್ದಾಳಿ

ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ನಿಮ್ಮ  ಹೆಸರಿನ ಹಿಂದೆ ಬಿ ಕೆ ಅಂತ ಇರೋದ್ರಿಂದ ಬಿಕನಾಸಿ ಹರಿ ಪ್ರಸಾದ್ ಎಂದು ಕರೆಯಬಾರದೇಕೆ ? ಎಂದು ಶ್ರೀಗಳ ಆಪ್ತ ಸಾಮಾಜಿಕ ಕಾರ್ಯಕರ್ತ ವಾಸು ದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತ ಪಡಿಸಿ ದ್ದಾರೆ.


ಪೂರ್ಣ ಬಹುಮತ ಇರೋ ಕಾಂಗ್ರೆಸ್ ಸರ್ಕಾರ ದಲ್ಲಿ  ಒಂದು ಮಂತ್ರಿ ಸ್ಥಾನ ನಿಗಮ ಮಂಡಳಿ ಹೀಗೆ ಏನೊಂದೂ ಇಲ್ಲದೇ ಅಕ್ಷರಶಃ ಮೂಲೆ ಗುಂಪಾಗಿರುವ ನೀವು ನಿಮ್ಮ ರಾಜಕೀಯ ನೋಡ್ಕೊಳ್ಳಿ. 


ಕಾಂಗ್ರೆಸ್ ಮುಖಂಡರನ್ನು ಮೆಚ್ಚಿಸಲು ಪೇಜಾವರ ಶ್ರೀಗಳ ವಿರುದ್ಧ ನಾಲಗೆ ಹರಿ ಬಿಡಲು ಎಳ್ಳಷ್ಟೂ ಯೋಗ್ಯತೆ ಇಲ್ಲದವರು ನೀವು . 


ಪೇಜಾವರ ಶ್ರೀಗಳು ಏನು?  ಅವರ ಸಾಧನೆ ವಿದ್ವತ್ತು  ಅವರ ದೇಶನಿಷ್ಠೆ ಧರ್ಮನಿಷ್ಠೆ ಸಮಾ ಜದ ಒಳಿತಿನ ಬಗ್ಗೆ ಅವರಿಗಿರುವ ಕಳಕಳಿ ಇತ್ಯಾದಿಗಳನ್ನು ನಿಮಗೆ ವಿವರಿಸುವ ಅಗತ್ಯ ಇಲ್ಲ. ಕತ್ತೆಗೆ ಕಸ್ತೂರಿಯ ಕಿಮ್ಮತ್ತು ಅರ್ಥ ವಾಗಲು ಸಾಧ್ಯವಿಲ್ಲ.


ಇಡೀ ದೇಶ ರಾಜ್ಯದಲ್ಲಿ ಯಾವತ್ತೂ ಒಂದು ಸೀಮಿತ ಜಾತಿಯ ಪರ ಮಾತನಾಡದೇ ಹೋರಾಟ ಪ್ರತಿಭಟನೆ ಹಕ್ಕೊತ್ತಾಯ ಆಗ್ರಹ ಗಳನ್ನು ಮಾಡದೇ ಸಮಸ್ತ ಹಿಂದು ಸಮಾಜದ ಇಡೀ ನಾಡಿನ ಜನರ ಒಳಿತಿಗಾಗಿ ಸಂದರ್ಭ ಎದುರಾಗೆಲ್ಲ ಶ್ರೀಗಳು  ಧ್ವನಿ ಎತ್ತುತ್ತಿರುವುದನ್ನು ದೇಶವೇ ನೋಡಿ ಗೌರವಿಸುತ್ತಿರುವುದಕ್ಕೆ ನಿಮ್ಮೆ ಯೋಗಗರು ಬಾಬಾ ರಾಮ್ ದೇವ್ ರಂಥವರು ಬಂದು ಕಾಲಿಗೆರಗಿ ನಮಸ್ಕರಿಸಿದ್ದು ಒಂದು ಸಾಕ್ಷಿ ಅಷ್ಟೆ . 

ರಾಮರಾಜ್ಯ ನಿರ್ಮಾಣದ ಕಲ್ಪನೆಯಲ್ಲಿ ಬಿಲ್ಲವ ಸಮಾಜದ    ಅನೇಕ ಬಡವರೂ ಸೇರಿದಂತೆ ನೂರಾರು ಮಂದಿಗೆ ಬಡ ಕುಟುಂಬಗಳಿಗೆ ಭಕ್ತರ ಸಹಕಾರದೊಂದಿಗೆ ಮನೆ ಕಟ್ಟಿಸಿ ಕೊಡುವ ಕಾರ್ಯ ಮಾಡುತ್ತಿರುವ ಶ್ರೀಗಳ ವಿಶಾಲ ಹೃದಯಿಗಳನ್ನು ಅರ್ಥ ಮಾಡಿ ಕೊಳ್ಳಲು ಜೀವನ ಪರ್ಯಂತ ಢೋಂಗಿ ಜಾತ್ಯ ತೀತ ವಾದದ ಮುಖವಾಡ ಹಾಕಿಕೊಂಡೇ ಜಾತಿ ಲಾಬಿ ನಡೆಸಿ ಅಧಿಕಾರ ಗಿಟ್ಟಿಸುವ ದೈನೇಸಿ ರಾಜಕಾರಣ ಮಾಡಿಕೊಂಡು ಬರುತ್ತಿರುವ ನಿಮ್ಮಂಥವರಿಗೆ ಏಳು ಜನ್ಮ ಹುಟ್ಟಿ ಬಂದರೂ ಅರ್ಥವಾಗದ  ಸಂಗತಿ.


ನಿಮ್ಮ ನೀಚ ರಾಜ ಕಾರಣದ ತೀಟೆ ತೀರಿಸಿ ಕೊಳ್ಳಲು ಪೇಜಾವರ ಶ್ರೀಗಳನ್ನು ಬಳಸಿ ಕೊಳ್ಳುವುದನ್ನು ಖಂಡಿಸುತ್ತೇವೆ. ಇಂಥ ಹೇಳಿಕೆ ಗಳಿಗಾಗಿ ಶ್ರೀಗಳವರಲ್ಲಿ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು  ಎಂದು ಆಗ್ರಹಿಸುತ್ತೇವೆ.


~ಜಿ. ವಾಸುದೇವ ಭಟ್ ಪೆರಂಪಳ್ಳಿ, ಶ್ರೀಗಳ ಆಪ್ತರು ಮತ್ತು ಸಾಮಾಜಿಕ ಕಾರ್ಯಕರ್ತರು


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!