BREAKING
ಸಾಧನೆ

ಮಣಿಪಾಲ: ಅಮರೀಶ ವಿ ನಾರಾಯಣ ಅವರಿಗೆ ಡಾಕ್ಟರೇಟ್ ಪದವಿ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ [MIT] ಸಂಶೋಧನ ವಿದ್ಯಾರ್ಥಿ ಶ್ರೀಯುತ ಅಮರೀಶ ವಿ ನಾರಾಯಣ ಅವರು ಬರೆದು ಮಂಡಿಸಿದ "ಶರಾವತಿ ನದಿಯ ಭೂವೈಜ್ಞಾನಿಕ ಮತ್ತು ರಾಸಾಯನಿಕ ಗುಣಲಕ್ಷಣಗಳ ಅಧ್ಯಯನ” ಎಂಬ ಶೀರ್ಷಿಕೆಯ ಡಾಕ್ಟರೇಟ್ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ [MAHE] ಸಂಸ್ಥೆಯು, ಪಿಎಚ್.ಡಿ. ಪದವಿಯನ್ನು ನೀಡಿದೆ. 

ಇವರ ಸಂಶೋಧನೆಯು ಕರ್ನಾಟಕ ರಾಜ್ಯದಲ್ಲಿ ಹರಿಯುವ ಶರಾವತಿ ನದಿಯ ಜಲೀಯ-ಗುಣಮಟ್ಟ ಮತ್ತು ಆ ನದಿಯು ಸಾಗರಕ್ಕೆ ಸಾಗಿಸುತ್ತಿರವ ರಾಸಾಯನಿಕಗಳ ಪ್ರಮಾಣಗಳ ಬಗ್ಗೆ ಸಂಶೋಧನಾತ್ಮಕ ಪ್ರಬಂಧವಾಗಿದ್ದು, ಕೇಂದ್ರ ಹಾಗು ರಾಜ್ಯ ಸರಕಾರದ ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಶೋಧನಾಸಕ್ತರಿಗೆ ಉಪಕಾರಿ ಆಗಬಲ್ಲುದು. ಈ ಸಂಶೋಧನೆಯ ಫಲಿತಾಂಶಗಳನ್ನು ಬರೆದು ಸಿದ್ದಪಡಿಸಿದ ಪ್ರಬಂಧಗಳು, ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. 

ಈ ಸಂಶೋಧನೆಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ [MAHE]ಕೊಡಮಾಡುವ ಡಾ. ಟಿ. ಎಂ. ಎ. ಪೈ ಶಿಷ್ಯವೇತನದ ಸಹಾಯದಿಂದ ಹಾಗು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಸಹಾಯದಿಂದ ಮಾಡಲಾಗಿದೆ. ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂ ವಿಜ್ಞಾನದ ನಿವೃತ್ತ ಪ್ರಾಧ್ಯಾಪಕರದ ಡಾ. ಹೆಚ್. ಎನ್. ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅದೇ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಬಾಲಕೃಷ್ಣ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.

ಮೂಲತ ಕಾಸರಗೋಡಿನವರಾದ ಶ್ರೀಯುತ ಅಮರೀಶ ನಾರಾಯಣ್ ಅವರು ಶ್ರೀ ಸಿ ನಾರಾಯಣನ್ ಮತ್ತು ಶ್ರೀಮತಿ ಪಿ ಆರ್ ವಿಜಯಮ್ಮ ದಂಪತಿಗಳ ಪುತ್ರ, ಹಾಗು ಡಾ. ಕೆ ಅಮೃತ ಅವರ ಪತಿಯಾಗಿರುತ್ತಾರೆ. ಪ್ರಸ್ತುತ ಇವರು ಎಂ.ಐ.ಟಿಯಲ್ಲಿ ಡಾಕ್ಟರೇಟ್ ನಂತರದ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!