BREAKING
ಸಾಧನೆ

ಮಣಿಪಾಲ: ವಿಷ್ಣು ಶರ್ಮ ಆಟಿಕುಕ್ಕೆ ಅವರಿಗೆ ಡಾಕ್ಟರೇಟ್ ಪದವಿ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ [MIT] ಸಂಶೋಧನ ವಿದ್ಯಾರ್ಥಿ ಶ್ರೀಯುತ ವಿಷ್ಣು ಶರ್ಮ ಆಟಿಕುಕ್ಕೆ ಅವರು ಬರೆದು ಮಂಡಿಸಿದ "ಸ್ವರ್ಣ-ಮಡಿಸಲ್ ನದಿಯ ಜಲಾನಯನ ಪ್ರದೇಶದ ಕೃಷಿ ಮಣ್ಣಿನಲ್ಲಿ ಭಾರ ಲೋಹಗಳ ಸಾಗಣೆ ಮತ್ತು ಅಂಟುವಿಕೆ” ಎಂಬ ಶೀರ್ಷಿಕೆಯ ಡಾಕ್ಟರೇಟ್ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ [MAHE] ಸಂಸ್ಥೆಯು, ಪಿಎಚ್.ಡಿ. ಪದವಿಯನ್ನು ನೀಡಿದೆ. 

ಇವರ ಸಂಶೋಧನೆಯು ಕೃಷಿ ಮಣ್ಣಿನ ಫಲವತ್ತತೆ ಮತ್ತು ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯಿಂದ ಆಗಬಲ್ಲ ದುಷ್ಪರಿಣಾಮಗಳ ಬಗೆಗಿನ ಸಂಶೋಧನಾತ್ಮಕ ವರದಿಯಾಗಿದ್ದು, ಕೃಷಿಕರಿಗೆ, ಕೇಂದ್ರ ಹಾಗು ರಾಜ್ಯ ಸರಕಾರದ ಕೃಷಿ ಇಲಾಖೆ ಹಾಗೂ ಸಂಶೋಧನಾಸಕ್ತರಿಗೆ ಉಪಕಾರಿ ಆಗಬಲ್ಲುದು. ಈ ಸಂಶೋಧನೆಯ ಫಲಿತಾಂಶಗಳನ್ನು ಬರೆದು ಸಿದ್ದಪಡಿಸಿದ ಪ್ರಬಂಧಗಳು, ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. 

ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂಗರ್ಭಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹೆಚ್. ಎನ್. ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅದೇ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಬಾಲಕೃಷ್ಣ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು. 

ಮೂಲತಃ ಕಾಸರಗೋಡಿನ ಶ್ರೀಯುತ ವಿಷ್ಣು ಶರ್ಮ ಆಟಿಕುಕ್ಕೆ ಅವರು ವಿದ್ವಾನ್ ಮಾಧವ ಭಟ್ ಆಟಿಕುಕ್ಕೆ ಹಾಗೂ ಸುಮತಿ ಆಟಿಕುಕ್ಕೆ ದಂಪತಿಗಳ ಪುತ್ರ. ಪ್ರಸ್ತುತ ಇವರು ಆಪಾವನಿ ಎನ್ವಿರಾನ್ಮೆಂಟಲ್ ಸೊಲ್ಯುಶನ್ಸ್ ಪ್ರೈ. ಲಿ. ಹಾಗೂ ರಿಪ್ಲ್ಯಾಸ್ಟಿಕೊ ಪ್ರೈ.ಲಿ. ಎಂಬ ಎರಡು ಸಂಸ್ಥೆಗಳನ್ನು ಆರಂಭಿಸಿ ಪರಿಸರ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!