BREAKING
ಅಂತರಾಷ್ಟ್ರೀಯ

ದುಬೈ-ಫ್ರೈಡೇ-ಕ್ರಿಕೆಟ್ ಲೀಗ್; ಟೆಕ್ನೋ ಟೈಟಾನ್ಸ್ ಕ್ವಾರ್ಟರ್ ಫೈನಲಗೆ ತೇರ್ಗಡೆ

ದುಬೈನಲ್ಲಿ ಜರಗುತ್ತಿರುವ ಅತ್ಯಂತ ಪ್ರತಿಷ್ಠಿತ ಫ್ರೈಡೇ ಕ್ರಿಕೆಟ್ ಲೀಗ್-9ರಲ್ಲಿ ಅವಿಭಜಿತ ದಕ್ಷಿಣಕನ್ನಡ ಮೂಲದ ಒಡೆತನ ಹೊಂದಿರುವ ಟೆಕ್ನೋ ಟೈಟಾನ್ಸ್ ಕ್ರಿಕೆಟ್ ತಂಡವು ಈಗಾಗಲೇ ಆಡಿದ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಭರ್ಜರಿಯಾಗಿ ಜಯಿಸಿ ಪ್ರೀ-ಕ್ವಾರ್ಟರ್ ಹಂತವನ್ನು ತಲುಪಿದೆ. ಮುಂದಿನ ಪಂದ್ಯದ ಜಯವು ತಂಡವನ್ನು ಸೆಮಿಫೈನಲಗೆ ತಲುಪಿಸುತ್ತದೆ.

ಟೆಕ್ನೋ ಟೈಟಾನ್ಸ್ ತಂಡವು ಉಡುಪಿಜಿಲ್ಲೆಯ ಸೂರಾಲಿನ ವಿಠಲ ರಿಷಾನ್ ನಾಯಕ್ ರವರ ನಾಯಕತ್ವ ಹಾಗೂ ಅಕದ್ ಅವರ ಉಪನಾಯಕತ್ವದಲ್ಲಿ ಕಣಕ್ಕೆ ಇಳಿದಿದೆ. ಉಳಿದಂತೆ ಅಬಿದ್, ಅಸ್ಮಾರ್, ನದೀಮ್, ಅಮಾನ್, ಓವೈಸಿ, ರಹೀಂ, ಅಲ್ಮಿನ್, ಅಶ್ರಫ್, ರಿಯಾಝ್, ದಾನಿಶ್, ರೆಹಾನ್, ಆಸೀಫ್, ನಿತಿನ್, ಶೇರ್ ಆಲಿ, ಆದಿಲ್, ತಲಾ ಅವರನ್ನು ಒಳಗೊಂಡಿರುವ ತಂಡಕ್ಕೆ ಮೇಲ್ವಿಚಾರಕರಾಗಿ ಜೀಶನ್, ಇಸ್ರಾರ್, ತನ್ವೀರ್ ಅವರು ಸಾಥ್ ನೀಡುತ್ತಿದ್ದಾರೆ.

ದುಬೈನ ಪ್ರತಿಷ್ಠಿತ ಹತ್ತು ತಂಡಗಳು ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ ಭಾಗವಹಿಸುತ್ತಿದ್ದು ಟೆಕ್ನೋ ಟೈಟಾನ್ಸ್ ತಂಡವು ಈ ಪಂದ್ಯಾಕೂಟದಲ್ಲಿ ಅತ್ಯಂತ ಭರವಸೆಯ ತಂಡವಾಗಿ ಪ್ರದರ್ಶನ ನೀಡುತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಮುಂದಿನ ಪಂದ್ಯಗಳು ಜರಗಲಿವೆ. 28 ಫೆಬ್ರವರಿಯಂದು ಫೈನಲ್ ಪಂದ್ಯವು ಯು.ಎ.ಯಿ ಅಜ್ಮಾನ ಮೈದಾನದಲ್ಲಿ ಜರಗಲಿದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!