BREAKING
ಶಿಕ್ಷಣ

ಎಂಐಸಿ 9ನೇ ಎಂ.ವಿ ಕಾಮತ್ ದತ್ತಿ ಉಪನ್ಯಾಸ

  


ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ (ಎಂಐಸಿ) 9ನೇ ಆವೃತ್ತಿಯ ಎಂ.ವಿ.ಕಾಮತ್ ದತ್ತಿ ಉಪನ್ಯಾಸವನ್ನು ಜನವರಿ 27, 2025ರಂದು ಮಣಿಪಾಲದಲ್ಲಿ ಆಯೋಜಿಸಿದೆ. 

ಇದರ ಅಂಗವಾಗಿ, ‘ದಿ ಪ್ರಿಂಟ್’ (The Print) ಇದರ ಸ್ಥಾಪಕರು, ಸಂಪಾದಕರು ಮತ್ತು ಖ್ಯಾತ ಪತ್ರಕರ್ತರಾಗಿರುವ ಶೇಖರ್ ಗುಪ್ತಾ ಅವರು ಉಪನ್ಯಾಸ ಮಾಡಲಿದ್ದಾರೆ. ಅಂದು ಅಪರಾಹ್ನ 2.30 ಗಂಟೆಗೆ ಮಣಿಪಾಲದ ಹೋಟೆಲ್ ವ್ಯಾಲಿ ವ್ಯೂನ ಲ್ಯುಮಿನೇರ್ ಹಾಲ್ ನಲ್ಲಿ ಈ ಉಪನ್ಯಾಸ ನಡೆಯಲಿದೆ. 

ಎಂವಿ ಕಾಮತ್ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸಗಳ ಸರಣಿಯನ್ನು ವಾರ್ಷಿಕವಾಗಿ ಎಂಐಸಿ ಆಯೋಜಿಸುತ್ತಿದೆ. ಈ ಮೂಲಕ ಮಣಿಪಾಲದವರೇ ಆದ, ಪ್ರಸಿದ್ಧ ಪತ್ರಕರ್ತ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷರಾದ ಡಾ. ಎಂವಿ ಕಾಮತ್ ಅವರ ಪರಂಪರೆಯನ್ನು ಸ್ಮರಿಸುತ್ತದೆ. ಡಾ. ಕಾಮತ್ ಅವರ ಜೀವನ ಮತ್ತು ಕೈಂಕರ್ಯಗಳು ಭಾರತದಾದ್ಯಂತ ಪತ್ರಕರ್ತರು ಮತ್ತು ವೃತ್ತಿಪರರನ್ನು ಪ್ರೇರೇಪಿಸುತ್ತಿದ್ದು, ಈ ಉಪನ್ಯಾಸ ಸರಣಿಯು ಮಾಧ್ಯಮ, ಸಮಾಜ ಮತ್ತು ಸಾರ್ವಜನಿಕ ಜೀವನದ ಬಗ್ಗೆ ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವ ಅವರ ಪರಂಪರೆಯನ್ನು ಮುಂದುವರಿಸುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. 

ಈ ವರ್ಷ ದತ್ತಿ ಉಪನ್ಯಾಸವನ್ನು ಮಾಡಲಿರುವ ಶೇಖರ್ ಗುಪ್ತಾ ಅವರು ಭಾರತೀಯ ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಆಳವಾದ ಅನುಭವವನ್ನುಹೊಂದಿದ್ದು, ಸಮಕಾಲೀನ ಸಾಮಾಜಿಕ-ರಾಜಕೀಯ ಕ್ರಿಯಾತ್ಮಕ ಶಕ್ತಿಗಳ ಬಗ್ಗೆ ಸೂಕ್ಷ್ಮ ತಿಳಿವಳಿಕೆಯುಳ್ಳವರಾಗಿದ್ದಾರೆ ಮತ್ತು ಸೂಕ್ಷ್ಮ ವಿಶ್ಲೇಷಣೆಗಳೊಂದಿಗೆ ಗಹನವಾದ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದು, ಮಾಧ್ಯಮ ವಲಯದಲ್ಲಿ ವಿಶ್ವಾಸಾರ್ಹತೆ ಮತ್ತು ಪರಿಣತೆ ಹೊಂದಿದ ಧ್ವನಿಯಾಗಿದ್ದಾರೆ. 

ಶೇಖರ್ ಅವರು ಪ್ರಶಸ್ತಿ ವಿಜೇತ ಪತ್ರಕರ್ತ, ಅಂಕಣಕಾರ, ಲೇಖಕರಾಗಿದ್ದು ಟಾಕ್ ಶೋ ಒಂದನ್ನೂ ನಡೆಸಿಕೊಡುತ್ತಾರೆ. 2017ರಲ್ಲಿ ಶೇಖರ್ ಅವರು ಭಾರತದಲ್ಲಿಅತಿ ವೇಗವಾಗಿ ಬೆಳೆಯುತ್ತಿರುವ ಉತ್ಪ್ರೇಕ್ಷಿತವಲ್ಲದ ಹೊಸ ಮಾಧ್ಯಮ ವೇದಿಕೆ ದಿ ಪ್ರಿಂಟ್ (The Print) ಅನ್ನು ಸ್ಥಾಪಿಸುವ ಮೂಲಕ ಅದರ ಮುಖ್ಯ ಸಂಪಾದಕರಾಗಿದ್ದಾರೆ.

ಸುಮಾರು ಐದು ದಶಕಗಳ ವೃತ್ತಿ ಜೀವನದಲ್ಲಿ,ಶೇಖರ್‍‌ ಅವರು ಪ್ರಮುಖ ವಿದ್ಯಮಾನಗಳ ವರದಿಯನ್ನು ಮಾಡಿದ್ದಾರೆ. ಭಾರತದ ಈಶಾನ್ಯ ಗಡಿಯ ಸಮಸ್ಯೆಗಳು, ಆಪರೇಷನ್ ಬ್ಲೂ ಸ್ಟಾರ್, ಬರ್ಲಿನ್ ಗೋಡೆಯ ಪತನ, ಬಾಗ್ದಾದ್‌ ನಿಂದ ಗಲ್ಫ್ ಯುದ್ಧದ ವರದಿ, ಶ್ರೀಲಂಕಾ ಸಮಸ್ಯೆ ಸೇರಿದಂತೆ ಪ್ರಮುಖ ಘಟನೆಗಳು ಇದರಲ್ಲಿ ಸೇರಿವೆ. ಇದರೊಂದಿಗೆ ಅವರು ಪಾಕಿಸ್ಥಾನಕ್ಕೆ ಹತ್ತಕ್ಕೂ ಹೆಚ್ಚು ಬಾರಿ ಕರ್ತವ್ಯದ ಮೇಲೆ ತೆರಳಿದ್ದಾರೆ. 

9ನೇ ಆವೃತ್ತಿಯ ಎಂವಿ ಕಾಮತ್ ದತ್ತಿ ಉಪನ್ಯಾಸವು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಮಾಧ್ಯಮ ವೃತ್ತಿಪರರು ಮತ್ತು ಸಾರ್ವಜನಿಕರಿಗೆ ಮುಕ್ತವಾದ ಪ್ರವೇಶವನ್ನು ಹೊಂದಿದೆ. ಈ ಉಪನ್ಯಾಸವು ಭಾರತೀಯ ಪತ್ರಿಕೋದ್ಯಮದ ವಿಕಸನದ ಹಾದಿ ಮತ್ತು ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರದ ಬಗ್ಗೆ ಶೇಖರ್ ಗುಪ್ತಾ ಅವರ ದೃಷ್ಟಿಕೋನಗಳನ್ನು ಕೇಳಲು ಉತ್ಸುಕರಾಗಿರುವ ದೊಡ್ಡ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. 



ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬಗ್ಗೆ:

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಡೀಮ್ಡ್ ಯುನಿವರ್ಸಿಟಿ ಸಂಸ್ಥೆಯಾಗಿದೆ. MAHE ಆರೋಗ್ಯ ವಿಜ್ಞಾನ (HS), ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನ (T&S) ವಿಷಯಗಳಲ್ಲಿ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಷೆಡ್‌ಪುರ ಮತ್ತು ದುಬೈನಲ್ಲಿರುವ ಮೂಲಕ 400ಕ್ಕೂ ಹೆಚ್ಚು ವಿಶೇಷ ಕೋರ್ಸ್‌ ಗಳನ್ನು ಹೊಂದಿದೆ. ಗಮನಾರ್ಹವಾದ ಶೈಕ್ಷಣಿಕ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳೊಂದಿಗೆ, MAHE ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020 ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು MAHE ಗೆ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಸ್ಥಾನಮಾನವನ್ನು ನೀಡಿದೆ. ಸಂಸ್ಥೆಯು ಪ್ರಸಕ್ತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) 4 ನೇ ಸ್ಥಾನದಲ್ಲಿದೆ, ಪರಿವರ್ತನಾತ್ಮಕ ಕಲಿಕಾ ಅನುಭವ ಮತ್ತು ಅತ್ಯುತ್ತಮ ಕ್ಯಾಂಪಸ್ ನ ಅನುಭವವನ್ನು ಬಯಸುವ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ಪ್ರತಿಭೆಗಳನ್ನು ಹುಡುಕುತ್ತಿರುವ ರಾಷ್ಟ್ರೀಯ ಮತ್ತು ಬಹು-ರಾಷ್ಟ್ರೀಯ ಕಾರ್ಪೊರೇಟ್‌ಗಳಿಗೆ MAHE ಆದ್ಯತೆಯ ಆಯ್ಕೆಯಾಗಿದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!