BREAKING
ಮಂಥನ

ರಜತ ಸಂಭ್ರಮದಲ್ಲಿರುವ ಪಂಚಮಿ ಟ್ರಸ್ಟಿನಿಂದ ಪಂಚಮಿ ಪುರಸ್ಕಾರ 2025


ಪಂಚಮಮ್ ಕಾರ್ಯ ಸಿದ್ಧಿ ಎಂಬ ಸೂಕ್ತಿಯಂತೆ  ರಜತಪೀಠಪುರ ಉಡುಪಿಯ ಪ್ರತಿಷ್ಠಿತ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಮ್ ಹರಿಶ್ಚಂದ್ರ ಹಾಗೂ ಲಕ್ಷ್ಮಿ ಹರಿಶ್ಚಂದ್ರ ದಂಪತಿಗಳು ತಮ್ಮ ಅಕ್ಕರೆಯ ಪುತ್ರಿ ಡಾ.ಪಂಚಮಿಯ ಹೆಸರಿನಲ್ಲಿ ಆರೋಗ್ಯ ಸೇವೆಯೊಂದಿಗೆ ಸಮಾಜ ಸೇವೆಗೂ ಪ್ರಾಮುಖ್ಯತೆ ನೀಡಿ ಜನ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದ ನೂತನ ಪರಿಕಲ್ಪನೆ ಪಂಚಮಿ ಟ್ರಸ್ಟ್ ರಿ. ಉಡುಪಿ.


    ರಜತ ಮಹೋತ್ಸವವನ್ನು ಆಚರಿಸುತ್ತಿರುವ ಪಂಚಮಿ ಟ್ರಸ್ಟ್  ಅಂದಿನಿಂದ ಇಂದಿನವರೆಗೂ ಜನಸೇವೆಯಲ್ಲಿ ತೊಡಗಿಸಿಕೊಂಡು  ಜನಾನುರಾಗಿ ಯಾಗಿದೆ. ಅಗತ್ಯವಾದ ಆರೋಗ್ಯ ಸೇವೆ, ಹಿರಿಯರ ಕಾಳಜಿ, ಕಿರಿಯರ ಶಿಕ್ಷಣ, ಯುವಕರ ಕೌಶಲ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹೀಗೆ ಪಂಚಸ್ತರದ ಚಿಂತನೆಗೆ ಮುಡಿಪಾದ ಪಂಚಮಿ ಟ್ರಸ್ಟ್   ಜನಸೇವೆಗೆ  ತೆರೆದುಕೊಂಡ ಪರಿ ಅನನ್ಯ, ಅನುಕರಣೀಯ, ಅಭಿನಂದನೀಯ.


ಬೃಹತ್ ರಕ್ತ ದಾನ ಶಿಬಿರ, ಉಚಿತ ವೈದ್ಯಕೀಯ ಶಿಬಿರ,  ಉಚಿತ ಡಯಲಿಸಿಸ್ ಚಿಕಿತ್ಸೆ, ಉಚಿತ ನೇತ್ರ ತಪಾಸಣಾ ಶಿಬಿರ, ಮಧುಮೇಹ ಚಿಕಿತ್ಸಾ ಶಿಬಿರದ ಆಯೋಜನೆ ಇವೆಲ್ಲ ಸಾಮಾಜಿಕ ಆರೋಗ್ಯ ಕಾಳಜಿಯ ಸೇವೆಗಳು. ಅದರೊಂದಿಗೆ ಮೂವರು ಬಡ ವಿದ್ಯಾರ್ಥಿಗಳಿಗೆ ಮೂರು ನೂತನ ಗೃಹ ಹಸ್ತಾಂತರ, ಹಸಿರು ಕ್ರಾಂತಿಗೆ ಒತ್ತು, ಸ್ವಾತಂತ್ರ್ಯೋತ್ಸವದ ಶುಭದಿನ ತಾಯಿ ಭಾರತಿಗೆ ವಿಶಿಷ್ಟ ನಮನ, ನೆರೆ ಸಂತ್ರಸ್ತರಿಗೆ ನೆರವು ,  ವಿದ್ಯಾನಿಧಿ ಸಮರ್ಪಣೆ,  ಗೋ ಸಂರಕ್ಷಣೆ, ವೃದ್ಧಾಶ್ರಮಕ್ಕೆ ನೆರವು, ಮಾಧ್ಯಮ ಮಿತ್ರರಿಗೆ ಗೌರವ,  ಮಾರ್ಗ ಮಧ್ಯೆ ಮಾರ್ಗ ಸೂಚಿ ಫಲಕದ ಅನಾವರಣ, ಶಿಕ್ಷಣಕ್ಕೆ ಸಹಾಯ ಹಸ್ತ, ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ವ್ಯವಸ್ಥೆಗಳ ನೆರವು, 2017 ರಿಂದ ಪ್ರತಿ ಭಾನುವಾರ ನಿರಂತರ ಸ್ವಚ್ಛತಾ ಅಭಿಯಾನ, ಹಲವಾರು ಶಿಕ್ಷಣ ಸಂಸ್ಥೆಗಳಿಗೆ ವಿವಿಧ ರೀತಿಯ ಸಹಾಯ ಹಸ್ತ , ಹೀಗೇ ಇನ್ನೂರಕ್ಕೂ ಮಿಗಿಲಾದ ವಿವಿಧ ಕಾರ್ಯಕ್ರಮಗಳ ಆಯೋಜನೆ, ಜನಹಿತ ಸೇವೆಗಳ ಸಂಗಮ ಪಂಚಮಿ ಟ್ರಸ್ಟ್ ರಿ. ಉಡುಪಿ. 


ಹೀಗೆ  ವಿಶಿಷ್ಟ ಕಾರ್ಯಕ್ರಮಗಳ  ರೂವಾರಿ ಪಂಚಮಿ ಟ್ರಸ್ಟ್ ನ ಪ್ರವರ್ತಕ ಗಾಂಧಿ ಆಸ್ಪತ್ರೆ, ಉಡುಪಿಯ ಸ್ಥಾಪಕ, ಆಡಳಿತ ನಿರ್ದೇಶಕ ಡಾ. ಎಂ ಹರಿಶ್ಚಂದ್ರರವರು ಮಾನವೀಯತೆಯನ್ನು ಲಾಂಛನವಾಗಿಸಿ ಕೊಂಡು, ಸಮಾಜ ಸೇವೆಯನ್ನು ಧ್ಯೇಯವಾಗಿಸಿಕೊಂಡು ಪಂಚಮಿ ಟ್ರಸ್ಟ್ ರಿ. ಉಡುಪಿಯ ಮುಖಾಂತರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗೆ ವಿಶೇಷ ರೀತಿಯಲ್ಲಿ ಪ್ರೋತ್ಸಾಹ ಸಹಕಾರ ನೀಡುತ್ತಿದ್ದು ತಮ್ಮ ಗಾಂಧಿ ಆಸ್ಪತ್ರೆಯ ತ್ರಿದಶಕಗಳ ಸಾರ್ಥಕ ಸೇವೆಯ ಸಂಭ್ರಮದಲ್ಲಿ ಈ ವರ್ಷ ಪಂಚ ಕ್ಷೇತ್ರಗಳಲ್ಲಿ ಸಾಧನೆಗೈದ ಬಹುಮುಖ ಪ್ರತಿಭೆಯ ಸಾಧಕ ರೋರ್ವರಿಗೆ ಪಂಚಮಿ ಪುರಸ್ಕಾರ ನೀಡುವ ವಿಶಿಷ್ಟ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ.


ನಾಡಿದ್ದು ಜನವರಿ 31 ಶುಕ್ರವಾರ ಸಂಜೆ 5:30ಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಯೋಜನೆಯ  "ಸಂಸ್ಕೃತಿ ಉತ್ಸವ   "ದಲ್ಲಿ ಈ ಬಾರಿ ಪ್ರಸಿದ್ಧ ಚಲನಚಿತ್ರ ನಟ ರಂಗಭೂಮಿ ನಿರ್ದೇಶಕ ಮಂಡ್ಯ ರಮೇಶ್ ಅವರಿಗೆ ಪಂಚಮಿ ಪುರಸ್ಕಾರ 2025 ನೀಡಿ ಗೌರವಿಸಲಾಗುವುದು..


✍️ ಪೂರ್ಣಿಮಾ ಜನಾರ್ದನ, ಕಾರ್ಯದರ್ಶಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!