BREAKING
ಶಿಕ್ಷಣ

ಆಚಾರ್ಯಾಸ ಏಸ್: ಪ್ರಥಮ ಪಿಯುಸಿ ರಿವಿಷನ್ ವರ್ಕಶಾಪ್

                                               

ಒಂಬತ್ತು,ಹತ್ತು,ಪಿಯುಸಿ, ಸಿಯಿಟಿ,ಜೆಯಿಯಿ,ನೀಟ್ ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ಸಂಸ್ಥೆ ವತಿಯಿಂದ ಇದೇ ಬರುವ ಫೆಬ್ರವರಿ ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಪ್ರಥಮ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಈ ಪರೀಕ್ಷೆಗೂ ಎರಡುವಾರ ಮುಂಚಿತವಾಗಿ ರಿವಿಷನ ವರ್ಕಶಾಪ್ (ಪರೀಕ್ಷಾ ಪೂರ್ವಭಾವಿ ಕಾರ್ಯಾಗಾರ) ಆಯೋಜಿಸಲಾಗಿದೆ.


ಇದೇ ಬರುವ ಫೆಬ್ರವರಿ 2ನೇ ತಾರೀಖು ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದರ ವರೆಗೆ ಈ ತರಬೇತಿಯು ಜರಗಲಿದೆ.ಫಿಸಿಕ್ಸ್ ಕೆಮಿಸ್ಟ್ರಿ ಮಾತ್ಸ್ ಹಾಗೂ ಬಾಯಲಜಿ ವಿಷಯವಾಗಿ ಪ್ರತಿಭಾನ್ವಿತ ಉಪನ್ಯಾಸಕರಿಂದ ಈ ತರಬೇತಿಯು ಆಯೋಜನೆಗೊಂಡಿದೆ.ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಸಬೇಕೆಂಬ ಉದ್ದೇಶದಿಂದ ಈ ವಿಶೇಷ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಗಿದೆ.


ಈ ತರಬೇತಿಯಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಿರೀಕ್ಷಿಸಲಾಗುವ ವಿವಿಧ ಅಂಕಗಳ ಅತೀಪ್ರಮುಖ ಪ್ರಶ್ನೆಗಳು ಹಾಗೂ ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಿಖರವಾಗಿ ಬರೆಯುವ ಕುರಿತು ಕಾರ್ಯಾಗಾರವು ರೂಪುಗೊಂಡಿದೆ.


ಜೊತೆಗೆ ಪರೀಕ್ಷೆಗೆ ಸಿದ್ಧತೆ, ಓದುವ ಕ್ರಮ,ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ರೀತಿ ನೀತಿ ಕ್ರಮಗಳ ಬಗ್ಗೆಯೂ ಕೂಡಾ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಲಭಿಸಲಿದೆ. ಬೆಳಿಗ್ಗೆ ಯಿಂದ ಸಂಜೆಯವರೆಗೆ ಜರಗುವ ಈ ತರಬೇತಿ ಕಾರ್ಯಾಗಾರವು ಸಂಪೂರ್ಣ ಉಚಿತವಾಗಿ ಜರಗಲಿದೆ.


ಆಸಕ್ತ ವಿದ್ಯಾರ್ಥಿಗಳು ಫೆಬ್ರವರಿ ಒಂದನೆ ತಾರೀಖು ಸಂಜೆಯ ಒಳಗೆ ಏಸ್ ತರಬೇತಿ ಸಂಸ್ಥೆ  ರಾಧೇ ಶ್ಯಾಮ್ ಕಟ್ಟಡ,ಶ್ರೀವೆಂಕಟ್ರಮಣ ದೇವಾಲಯದ ಸಮೀಪ ತೆಂಕಪೇಟೆ ಉಡುಪಿ ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ 9901420714 ಅಥವಾ 08204299111 ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಂತೆಯೇ ಒಂಬತ್ತು ಹತ್ತನೇ ತರಗತಿ ಹಾಗೂ ಪಿಯುಸಿ ವೆಕೇಷನ್ ಬ್ಯಾಚಗಳಿಗೆ ಹಾಗೂ ಸಿಯಿಟಿ-2025 ಕ್ರಾಶ ಕೋರ್ಸ್  ತರಬೇತಿಗೆ ಈಗಾಗಲೇ ನೋಂದಣಿ ಆರಂಭವಾಗಿದೆ.




Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!