BREAKING
ಸುದ್ದಿ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅನುಷ್ಠಾನ ಬಗ್ಗೆ ಅಧಿಕಾರಿಗಳೊಂದಿಗೆ ಸಂಸದ ಕೋಟ ಚರ್ಚೆ

ಉಡುಪಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅನುಷ್ಠಾನವನ್ನು ತೀವ್ರಗೊಳಿಸಲು ಮತ್ತು ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ರಜತಾದ್ರಿ, ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸುಧೀರ್ಘ ಸಭೆ ನಡೆಸಿದರು. 


ಆಯ್ಕೆಯಾದ ೬,೭೩೨ ಫಲಾನುಭವಿಗಳ ಫೈಕಿ ೪,೮೬೪ ಮಂದಿ ತರಬೇತಿ ಪಡೆದಿದ್ದು, ಇನ್ನುಳಿದ ಅರ್ಜಿದಾರರಿಗೆ ತರಬೇತಿ ಕೇಂದ್ರಗಳನ್ನು ಸಮರ್ಪಕಗೊಳಿಸಲು ಮತ್ತು ಪ್ರತಿಯೊಬ್ಬ ತರಬೇತಿ ಪಡೆದ ವ್ಯಕ್ತಿಗಳಿಗೆ ಸಾಲ ಸೌಲಭ್ಯ ಒದಗಿಸಲು ಸಂಸದ ಕೋಟ ಸೂಚನೆ ನೀಡಿದರು.


ಟೈಲರಿಂಗ್, ಕ್ಷೌರಿಕರು, ಬುಟ್ಟಿ ತಯಾರಕರು, ಮರಗೆಲಸ ಮಾಡುವವರು, ಚಿನ್ನ ಬೆಳ್ಳಿ ಕೆಲಸಗಾರರು, ಮೇಸ್ತಿಗಳು, ಮಡಿಕೆ ತಯಾರಕರು, ಶಿಲ್ಪಕಲಾಕಾರರು ಮುಂತಾದ ೧೮ ಸಾಂಪ್ರಾದಾಯಿಕ ಕುಲಕಸುಬು ಗಳಿಗೆ ತರಬೇತಿ ನೀಡಿ ಮತ್ತು ಉತ್ತಮ ಗುಣಮಟ್ಟದ ಟೂಲ್ ಕಿಟ್‌ಗಳನ್ನು ಒದಗಿಸಿ, ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಶೀಘ್ರ ಅನುಷ್ಠಾ ನಕ್ಕೆ ಸಹಕರಿಸಬೇಕೆಂದು ಸಂಸದ ಕೋಟ ಸೂಚಿಸಿರುತ್ತಾರೆ. 


​ರಾಷ್ಟ್ರೀಕೃತ  ಬ್ಯಾಂಕ್‌ಗಳಲ್ಲಿರುವ ಹೆಚ್ಚು ಬೆಲೆಯ ಸ್ಟ್ಯಾಂಪ್  ಪೇಪರ್ ವಿರಹಿತ ಪಡಿಸಬೇಕೆಂದು ಸಂಸದರು ಸಲಹೆ ಇತ್ತರು. ಸುದೀರ್ಘ ಚರ್ಚೆಯ ನಂತರ ಮುಂದಿನ ತಿಂಗಳು ಜಿಲ್ಲಾ ಮಟ್ಟದ ವಿಶ್ವ ಕರ್ಮ ಫಲಾನುಭವಿಗಳ ಕಾರ್ಯಾಗಾರ ಮತ್ತು ಸಾಲ ಸೌಲಭ್ಯ ವಿತರಿಸಲು ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಕೋಟ ಸೂಚಿಸಿದರು. 


ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀನಿವಾಸ ರಾವ್, ಸಹಾಯಕ ನಿರ್ದೇಶಕರು, ಕೈಗಾರಿಕಾ ಇಲಾಖೆ ಶ್ರೀ ಸೀತಾರಾಮ ಶೆಟ್ಟಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಹರೀಶ್, ಹಾಗೂ ಕೇಂದ್ರ ಸರ್ಕಾರದ ವಿಶ್ವಕರ್ಮ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಶ್ರೀನಿಧಿ ಹೆಗ್ಡೆ ಹಾಗೂ ಶ್ರೀ ಸುರೇಂದ್ರ ಪಣಿಯೂರು ರವರು ಹಾಜರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!