BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಅಪರಾಧ

ಆಸ್ತಿಗಾಗಿ ಹೆಣ್ಮಕ್ಕಳ ಕಾಟ : ಬೀದಿಪಾಲಾದ ತಾಯಿ, ಮಗನನ್ನು ರಕ್ಷಿಸಿದ ವಿಶು ಶೆಟ್ಟಿ

ಉಡುಪಿ : 6 ಎಕರೆ ಜಮೀನು ಇದ್ದರೂ, ಆಸ್ತಿ ವಿಷಯದಲ್ಲಿ ತನ್ನದೇ ಹೆಣ್ಣುಮಕ್ಕಳ ಕಾಟ ತಾಳಲಾರದೆ ಮನೆ ಬಿಟ್ಟು ಬಂದು ಉಡುಪಿಯ ಸರಕಾರಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯ ನಗರದ ನಿವಾಸಿ ಜಯಮ್ಮ (80) ಹಾಗೂ ಆಕೆಯ ಮಗ ಮಂಜುನಾಥ ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸೋಮವಾರ ರಕ್ಷಿಸಿದ್ದಾರೆ.

ವೃದ್ಧೆ ಜಯಮ್ಮ ಅವರನ್ನು ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಗಿದ್ದು, ಅನಾರೋಗ್ಯ ಪೀಡಿತ ಮಂಜುನಾಥನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಜಯಮ್ಮ ಅವರ ಗಂಡ ಕೊರೊನಾ ಸಂದರ್ಭದಲ್ಲಿ ತೀರಿಕೊಂಡಿದ್ದು, ನಂತರ ಆಸ್ತಿ ವಿಚಾರದಲ್ಲಿ ಈಕೆಯ 4 ಮಂದಿ ಹೆಣ್ಮಕ್ಕಳು ಇನ್ನಿಲ್ಲದ ತಗಾದೆ ತೆಗೆದಿದ್ದಾರೆ. ಅವರು ದಿನನಿತ್ಯ ನೀಡುತ್ತಿರುವ ಹಿಂಸೆ ತಾಳಲಾರದೆ ಅನಾರೋಗ್ಯ ಪೀಡಿತ ಮಗನೊಂದಿಗೆ ಬೀದಿ ಪಾಲಾದೆ ಎಂದು ಆಕೆ ತಿಳಿಸಿದ್ದಾರೆ.

ಹೆಣ್ಮಕ್ಕಳ ಇಚ್ಚೆಯಂತೆ ಆಸ್ತಿಯನ್ನು ಕೊಡಲು ನನಗೆ ಸಾಧ್ಯವಿಲ್ಲ. ಹೀಗಾಗಿ ನನ್ನೆಲ್ಲಾ ಆಸ್ತಿಪಾಸ್ತಿಯ ದಾಖಲೆಗಳೊಂದಿಗೆ ಮನೆ ಬಿಟ್ಟು ಬಂದಿದ್ದೇನೆ. ನನ್ನನ್ನು ಯಾವುದಾದರೂ ಆಶ್ರಮಕ್ಕೆ ಸೇರಿಸಿ, ಹಿಂಸೆಯಿಂದ ಪಾರುಮಾಡಿ ಎಂದು ಆಕೆ ಅಂಗಲಾಚಿದ್ದಾರೆ.

ಪ್ರಕರಣದ ಬಗ್ಗೆ ಹಿರಿಯ ನಾಗರಿಕರ ಸಹಾಯವಾಣಿಗೆ ವಿಶು ಶೆಟ್ಟಿ ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಕೃತಿಕ್ ಕೊಕ್ಕರ್ಣೆ ಸಹಕರಿಸಿದ್ದರು.

ಸತ್ಯ ಅಸತ್ಯತೆಯ ಬಗ್ಗೆ ಏನನ್ನು ಹೇಳಲಾಗುವುದಿಲ್ಲ. ವೃದ್ದಪ್ಯದ ಸಮಯದಲ್ಲಿ ಈ ರೀತಿ ಬೀದಿಪಾಲಾಗುವುದು ಸರಿಯಲ್ಲ. ವೃದ್ದೆಗೆ ಸಂಬಂಧಪಟ್ಟವರು ಸರಿಯಾದ ನ್ಯಾಯವನ್ನು ಒದಗಿಸಿಕೊಡಬೇಕು.

    ~ವಿಶುಶೆಟ್ಟಿ ಅಂಬಲಪಾಡಿ



--


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!