ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಂಬೆ ಮಿಷನ್ ಕಂಪೌಂಡ್, 76 ಬಡಗಬೆಟ್ಟು ನಿವಾಸಿ ದಿವಂಗತ ಶಬ್ಬೀರ್ ಅಹಮ್ಮದ್ ಅಲಿಯಾಸ್ ಶಬ್ಬೀರ್ ಶೇಖ್ ಎಂಬವರ ಪುತ್ರ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಶೇಖ್ ಪ್ರಾಯ 34 ವರ್ಷ ಎಂಬಾತನನ್ನು ದಿನಾಂಕ 13/08/2026 ರಂದು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧಿಸಲಾಯಿತು. ಈತನನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧಿಸಲು ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆರವರ ವರದಿಯ ಮೇರೆಗೆ ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರುರವರು ದಿನಾಂಕ 13/08/2026 ರಂದು ಬಂಧನ ಆದೇಶ ಹೊರಡಿಸಿರುತ್ತಾರೆ.
ಬಂಧಿತ ಆಸಾಮಿಯ ವಿರುದ್ದ ಉಡುಪಿ ಜಿಲ್ಲೆಯ ಮಣಿಪಾಲ ಠಾಣೆಯಲ್ಲಿ 03 ಪ್ರಕರಣ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ತಲಾ 02 ಪ್ರಕರಣ ಹಾಗೂ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಮಣಿಪಾಲ ಹಾಗೂ ಉಡುಪಿ ನಗರ ಠಾಣೆಯಲ್ಲಿ ತಲಾ 01 ಪ್ರಕರಣ ದಾಖಲಾಗಿರುತ್ತದೆ. ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ಎಲ್ಲಾ 05 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ದಾಖಲಾದ 02 ಸೇವನೆ ಪ್ರಕರಣಗಳಲ್ಲಿ ಶಿಕ್ಷೆ ಆಗಿರುತ್ತದೆ.
ಬಂಧಿತ ಆರೋಪಿಯನ್ನು ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.
