BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸಂಘ ಸಂಸ್ಥೆ

ಕಲಾನಿಧಿ ರಿ ಉಡುಪಿಯ ದಶಮಾನೋತ್ಸವ; ಸಾಧಕರಿಗೆ ಸನ್ಮಾನ

ರಂಗಭೂಮಿಯು ಕಲಾವಿದರಿಗೆ ಶಿಸ್ತು, ಸಮಯ ಪಾಲನೆ, ಬದ್ಧತೆಯನ್ನು ಕಲಿಸುತ್ತದೆ. ಕಲಾವಿದರಾದವರು ಅಹಂಕಾರ ಪಡಬಾರದು. ವಿಶ್ವ ರಂಗಭೂಮಿಗೆ ಭಾರತದ ಕೊಡುಗೆ ಅಪಾರವಾದದ್ದು ಎಂದು ಶ್ರೀ ಯೋಗೀಶ್ ಗಾಣಿಗ ಕೊಳಲಗಿರಿ ಹೇಳಿದರು. ಅವರು ಸಾಂಸ್ಕೃತಿಕ ಕಲಾ ಪ್ರಾಕಾರಗಳ ಸಂಸ್ಥೆಯಾದ ಕಲಾನಿಧಿ ರಿ ಉಡುಪಿ ಇದರ ದಶಮಾನೋತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯನ್ನು ಕುಮಾರಿ ಅಕ್ಷರಗಳಿಗೆ ಮೇಕಪ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿಯವರು ಬೇರೆ ಬೇರೆ ಕಲೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿ ದುಶ್ಚಟಗಳಿಗೆ ಬಲಿಯಾಗಲಾರ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಉಡುಪಿ ಜಿಲ್ಲೆಯ ಕೊಡುಗೆ ಗಣನೀಯ ವಾದದ್ದು ಎಂದರು. ಅತಿಥಿಗಳಾಗಿ ಶ್ರೀ ಕೆ‌.ಜೆ.ಗಣೇಶ್, ಶ್ರೀ ದಯಾನಂದ ಡಿ. ಶ್ರೀಮತಿ ಸೀತಾಲಕ್ಷ್ಮಿ ಅಡಿಗ ಪಾಲ್ಗೊಂಡಿದ್ದರು. ಶ್ರೀ ಬೈಲೂರು ಪ್ರಭಾಕರ ಭಂಡಾರಿ, ಶ್ರೀ ಮಂಜುನಾಥ ರಾವ್ ಹಾವಂಜೆ, ಶ್ರೀ ರಾಜ್ ಗೋಪಾಲ ಶೇಟ್ ಉಡುಪಿ, ಶ್ರೀಮತಿ ಉಷಾ ರಮಾನಂದ ದೊಡ್ಡಣಗುಡ್ಡೆ, ಶ್ರೀ ಪ್ರಕಾಶ್ ರಾವ್ ಉಡುಪಿ, ಶ್ರೀ ವೀಕ್ಷಿತ್ ಕೊಡಂಚ ಮಾರ್ಪಳ್ಳಿ, ಶ್ರೀ ಸಂದೀಪ್ ರೈ ಉಡುಪಿ, ಶ್ರೀ ರಘು ಪಾಂಡೇಶ್ವರ ಸಾಸ್ತಾನ, ಶ್ರೀ ಸದಾನಂದ ಕುಂದರ್ ಕೋಡಿಬೆಂಗ್ರೆ, ಶ್ರೀಮತಿ ಸ್ವರಾಜ್ಯಲಕ್ಷ್ಮಿ ಅಲೆವೂರು, ಶ್ರೀ ಗೌತಮ್ ಕುಂದರ್ ಪಿತ್ರೋಡಿ, ಶ್ರೀ ಮಧುಕರ ಸನಿಲ್ ಉದ್ಯಾವರ, ಶ್ರೀ ಪ್ರವೀಣ್ ಆಚಾರ್ಯ ದೊಡ್ಡಣ್ಣಗುಡ್ಡೆ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಪ್ರಣಮ್ಯ ರಾವ್ ಹಾಗೂ ಶ್ರೀನಿಧಿ ವಾಚಿಸಿದರು. ರೋಹಿತ್ ಪ್ರಾರ್ಥನೆಗೈದರು. ಕಲಾನಿಧಿ ಸಂಸ್ಥೆಯ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮಿ ಸ್ವಾಗತಿಸಿ ನಿರೂಪಿಸಿದರು. ನಟರಾಜ್ ಮೇಲಂಟ ವಂದಿಸಿದರು.ತಂಡದ ಸದಸ್ಯರು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಂಗಗೀತೆಗಳನ್ನು ಹಾಡಲಾಯಿತು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!