BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಬೈಲೂರು ನಚಿಕೇತನ ವಿದ್ಯಾಲಯದಲ್ಲಿ ಚಿಣ್ಣರ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮ

ಗ್ರಾಮ ವಿಕಾಸ (ಉಡುಪಿ ಜಿಲ್ಲೆ) ಮತ್ತು ನಚಿಕೇತನ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಬೈಲೂರು ಶಾಲೆಯಲ್ಲಿ ಮೂರು ದಿನಗಳ ಚಿಣ್ಣರ ಸಂಸ್ಕಾರ ಶಿಬಿರ ಆಯೋಜಿಸಲಾಯಿತು. ಶಾಲಾ ಸಂಸ್ಥಾಪಕರಾದ ಮಚ್ಚೇಂದ್ರನಾಥ್ ಅವರ ನೇತೃತ್ವದಲ್ಲಿ ಶಿಬಿರ ಉದ್ಘಾಟನೆಗೊಂಡು, ಶಿಬಿರಾರ್ಥಿ ಮಕ್ಕಳ ಸಾರ್ವತ್ರಿಕ ಹುಟ್ಟುಹಬ್ಬ ಆಚರಣೆಯೊಂದಿಗೆ ಸಮಾರೋಪ ಕಾರ್ಯಕ್ರಮ ಜರುಗಿತು.

ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕ ಶಿಬಿರದಲ್ಲಿ ಕಲಿತ ರಾಷ್ಟ್ರೀಯತೆಯ ಭಾವನೆಗಳನ್ನು ಉಜ್ಜೀವನಗೊಳಿಸಿದರು. ಪೋಷಕರು ಮಕ್ಕಳಿಗೆ ಆರತಿ ಎತ್ತಿ, ಅರ್ಚನೆ ಮಾಡಿ ಆಶೀರ್ವದಿಸುವ ಮೂಲಕ ಭಾವನಾತ್ಮಕ ಸಂಬಂಧವನ್ನು ಬೆಳೆಸಿದರು, ಇದರಿಂದ ಶಿಬಿರಕ್ಕೆ ಮತ್ತಷ್ಟು ಮೆರುಗು ಸೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಕೀಯ ಮುಖಂಡ ಹಾಗೂ ಸಮಾಜಸೇವಕರಾದ ವಿಕ್ರಂ ಹೆಗ್ಡೆ ಅವರು, "ನಚಿಕೇತನ ವಿದ್ಯಾಲಯ ಮಕ್ಕಳಲ್ಲಿ ರಾಷ್ಟ್ರೀಯತೆಯ ಭಾವನೆ ಬೆಳೆಸುವ ಕಾರ್ಯ ಮಾಡುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ನೆರಳಾಗಿ ನಿಲ್ಲುವಂತಹ ಇಂತಹ ಶಾಲೆಗಳು ಇನ್ನಷ್ಟು ಹೆಚ್ಚಾಗಿ ಸ್ಥಾಪನೆ ಆಗಲಿ" ಎಂದು ಅಭಿಪ್ರಾಯಪಟ್ಟರು.

"ಹಿಂದೂ ಹುಟ್ಟುಹಬ್ಬದ ಅವಶ್ಯಕತೆ ಮತ್ತು ಅದರ ವೈಶಿಷ್ಟ್ಯ" ಕುರಿತು ಶ್ರೀಮತಿ ರಮಿತಾ ಶೈಲೆಂದ್ರ ವಿವರಿಸಿದರು. ಕಾರ್ಯಕ್ರಮವನ್ನು ಶಾಲಾ ಮಾತಾಜಿ ವಿದ್ಯಾ ನಿರೂಪಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕವಿತಾ ಮತ್ತು ಮಾತೃ ಮಂಡಳಿಯ ಅಧ್ಯಕ್ಷೆ ದೀಕ್ಷಿತಾ ರಾವ್ ಉಪಸ್ಥಿತರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!