BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸಾಧನೆ

'ಕಲಾ ಪ್ರವೀಣ' ಪ್ರಶಸ್ತಿಗೆ ವೈ. ಕೆ. ಸಂಧ್ಯಾ ಶರ್ಮ ಆಯ್ಕೆ

ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ಶ್ರೀಮತಿ ವೈ. ಕೆ. ಸಂಧ್ಯಾ ಶರ್ಮ ಅವರು 2025 ನೇ ಸಾಲಿನ ಶ್ರೀಯುತ ಈಶ್ವರಯ್ಯ ಅನಂತಪುರ ಅವರ ಹೆಸರಿನಲ್ಲಿ ಕೊಡಲ್ಪಡುವ ‘ಕಲಾ ಪ್ರವೀಣ‘ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಇವರು ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ ನಾಟಕಗಳ ಖ್ಯಾತ ವಿಮರ್ಶಕಿಯೂ ಕೂಡ. ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. ಕನ್ನಡ ಎಂ.ಎ ಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರು, ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಾರ್ತಾ ಇಲಾಖೆಯಲ್ಲಿಹಲವು ವರ್ಷಗಳ ಕಾಲ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು, ಕಳೆದ 55 ವರ್ಷಗಳಿಂದ ಸಾಹಿತ್ಯಕೃಷಿ ನಡೆಸುತ್ತಾ 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಖ್ಯಾತಿ ಇವರಿಗಿದೆ. ಜನಪ್ರಿಯ ಲೇಖಕಿಯಾದ ಇವರು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸುಮಾರು 950 ಕ್ಕೂ ಮಿಗಿಲಾದ ನಾಟಕ-ನೃತ್ಯ-ಸಂಗೀತ ವಿಮರ್ಶಾ ಲೇಖನಗಳು ಪ್ರಕಟಣೆಗೊಂಡ ಹಿರಿಮೆ ಇವರದ್ದು. ಆಕಾಶವಾಣಿ ಮತ್ತು ದೂರದರ್ಶನದಲ್ಲೂ ಮಾನ್ಯತೆ ಪಡೆದ ಕಲಾವಿದೆ ಇವರು. ಕಳೆದ 48 ವರ್ಷಗಳಿಂದ ತಮ್ಮದೇ ಆದ 'ಸಂಧ್ಯಾ ಕಲಾವಿದರು' ಎಂಬ ಹವ್ಯಾಸಿ ನಾಟಕ ತಂಡವನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ 'ಸಂಧ್ಯಾ ಪತ್ರಿಕೆ' ಎಂಬ ಸಾಂಸ್ಕೃತಿಕ ಅಂತರ್ಜಾಲ ಪತ್ರಿಕೆಯನ್ನೂ ಹುಟ್ಟು ಹಾಕಿ ಮುನ್ನಡೆಸುತ್ತಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಸಂದ ಪ್ರಶಸ್ತಿಗಳು ಅನೇಕ. 'ಕಲಾವಿಹಾರಿ' ಶ್ರೀಯುತ ಎ.ಈಶ್ವರಯ್ಯ ಅವರ ಹೆಸರನಲ್ಲಿ ಅವರ ಕುಟುಂಬವು ರಾಗ ಧನ ಉಡುಪಿ ಸಂಸ್ಥೆಯ ಮೂಲಕ ವರ್ಷಪ್ರತಿ ಕೊಡಮಾಡುವ 'ಕಲಾ ಪ್ರವೀಣ‘ ಪ್ರಶಸ್ತಿಗೆ ಈ ಬಾರಿ ಶ್ರೀಮತಿ .ವೈ.ಕೆ. ಸಂಧ್ಯಾ ಶರ್ಮ ಅವರು ಆಯ್ಕೆಯಾಗಿರುತ್ತಾರೆ ಎಂದು ಶ್ರೀ.ಈಶ್ವರಯ್ಯ ಅನಂತಪುರ ಅವರ ಸಹೋದರ ಶ್ರೀಕೃಷ್ಣಯ್ಯ ಅನಂತಪುರ, ಮಗ ಶೈಲೇಂದ್ರ ಅನಂತಪುರ ಮತ್ತು ಕುಟುಂಬದವರು ತಿಳಿಸಿರುತ್ತಾರೆ, ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!