BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಕುರುಡುಂಜೆ ಜಲಜಮ್ಮ ಹೆಗ್ಡೆ ಅವರ ಶತಮಾನೋತ್ಸವ ಸಂಭ್ರಮ

ಉಡುಪಿ: ಕುರುಡುಂಜೆ ಜಲಜಮ್ಮ ಹೆಗ್ಡೆ ಅವರ ಶತಮಾನೋತ್ಸವ ಸಂಭ್ರಮ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಸೂರೆಬೆಟ್ಟು ಮನೆಯ ಪ್ರಾಂಗಣದಲ್ಲಿ ನಡೆಯಿತು. 

ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಖ್ಯಾತ ಭಜನಾ ತಂಡಗಳ ಮಹಾ ಸಮ್ಮಿಲನದಲ್ಲಿ "ಭಕ್ತ ಭಾವಧಾರೆ", "ಮಹಾಮೃತ್ಯುಂಜಯ ಹೋಮ", ಶ್ರೀ ಕೋದಂಡರಾಮ ಕೃಪಾಷೋಷಿತ ಹನುಮಗಿರಿ ಮೇಳದವರಿಂದ " ಗರುಡೋದ್ಭವ ಪುರುಷಮೃಗ" ಯಕ್ಷಗಾನ ಹಾಗೂ ಕಲ್ಕುಡ, ಪಂಜುರ್ಲಿ, ವಡ್ತೆ, ಅಣ್ಣಪ್ಪ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನೆರವೇರಿತು. 

ಈ ಸಂದರ್ಭದಲ್ಲಿ ನೂರು ಸಂವತ್ಸರಗಳನ್ನು ಪೂರೈಸಿದ ಕುರುಡುಂಜೆ ಜಲಜಮ್ಮ ಹೆಗ್ಡೆ ಅವರನ್ನು ಬಾರ್ಕೂರು ಬಂಟರ ಮಹಾ ಸಂಸ್ಥಾನದ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಶಾಲು, ಪೇಟ, ಹಾರ, ಸನ್ಮಾನ ಪತ್ರ ಹಾಗೂ ಶತಮಾನದ ಮಾತೆ ಎಂಬ ಬಿರುದಿನೊಂದಿಗೆ ಗೌರವಿಸಿದರು.


ಬಳಿಕ ಮಾತನಾಡಿದ ಸಂತೋಷ್ ಗುರೂಜಿ‌ ಅವರು, ಮರಿಮಕ್ಕಳನ್ನ ನೋಡಿದ ಜಲಜಮ್ಮನವರಿಗೆ ಶತಮಾನದ ಮಾತೆ ಬಿರುದನ್ನು ಕೊಟ್ಟಿದ್ದೇವೆ. ಸಂಸ್ಥಾನದಲ್ಲಿ ನೋವನ್ನು ಮರೆಮಾಚಿಸುವ 50 ಹಿರಿ ಜೀವಗಳು ಇರುವುದಕ್ಕೆ ಯಾರಾದರೂ ಪುಣ್ಯಾತ್ಮರು ಸಂತೋಷಧಾಮವನ್ನು ನಿರ್ಮಾಣ ಮಾಡಿ ಅವರು ಸಂಜೆಯ ಸಮಯವನ್ನು ನಮ್ಮಂತಹ ಸಾಧು ಸಂತರ ಜೊತೆಯಲ್ಲಿ ಕಳೆಯುವಂತೆ ಅವಕಾಶವನ್ನು ಮಾಡಿಕೊಡಬೇಕು ಎನ್ನುವ ಕನಸನ್ನು ನಾವು ಕಂಡಿದ್ದೇವೆ. ಶತಮಾನದ ಮಾತೆ ಎನ್ನುವ ಬಿರುದನ್ನು ನೀಡಿರುವ ಈ ಸುಸಂದರ್ಭದಲ್ಲಿ ವೃದ್ಧಾಶ್ರಮಕ್ಕೆ ನಾಂದಿಯಾಗಿರತಕ್ಕಂತಹ ಒಂದು ಘಟಳಿಗೆಯಾಗಿ ಅವರ ಆಶೀರ್ವಾದ ಅಲ್ಲಿಗೆ ಸಿಗಲಿ ಎನ್ನುವಂತಹ ಆಶಿರ್ವಚನ ನೀಡಿದ್ದಾರೆ. ಇದೇ ವೇಳೆ ಹಿರಿ ಜೀವಗಳಿಗೆ ಸಂತೋಷಧಾಮ ಮಾಡಬೇಕು ಎನ್ನುವ ಸಂಕಲ್ಪ ಆದಷ್ಟು ಬೇಗ ಈಡೇರಲಿ ಎಂದು ಹಾರೈಸಿದ್ದಾರೆ. ಜಲಜಮ್ಮನವರನ್ನು ಅವರ ಮಕ್ಕಳು, ಮೊಮ್ಮಕ್ಕಳನ್ನು ನೋಡಿ ಎಲ್ಲರೂ ಕಲಿಯಬೇಕು. ತುಳು ನಾಡಿನ ಸಮಸ್ತ ದೈವ ದೇವರುಗಳು ಅವರ ಕುಟುಂಬಕ್ಕೆ ರಕ್ಷಣೆ ನೀಡಿ, ಸಂತೋಷವನ್ನು ನೀಡಲಿ ಎಂದು ಆಶೀರ್ವದಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!