ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಕಾಮ್, ಬಿಬಿಎ ಮತ್ತು ಬಿಸಿಎ ಪದವಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಡಾ. ಟಿ ಎಂ ಎ ಪೈ ಫೌಂಡೇಶನ್ ಮಣಿಪಾಲ ವತಿಯಿಂದ ವಿದ್ಯಾರ್ಥಿ ವೇತನ ಸ್ಕಾಲರ್ ಶಿಪ್ ಪರೀಕ್ಷೆಯನ್ನು ಮೇ 26 ಸೋಮವಾರದಂದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಈಗಾಗಲೇ ದಾಖಲಾತಿ ಪಡೆದವರು ಹಾಗೂ ಪಡೆಯಲು ಬಯಸುವ ದ್ವಿತೀಯ ಪಿಯು ತೇರ್ಗಡೆಯಾದ ಎಲ್ಲಾ ವಿಭಾಗದ ( ವಾಣಿಜ್ಯ, ವಿಜ್ಞಾನ, ಕಲೆ) ವಿದ್ಯಾರ್ಥಿಗಳು ಬರೆಯಬಹುದಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ 5 ಪ್ರತಿಶತ ಅಭ್ಯರ್ಥಿಗಳಿಗೆ ಶೇಕಡಾ 100 ರಷ್ಟು ಟ್ಯೂಶನ್ ಶುಲ್ಕ ಕಡಿತವಿದ್ದು, ನಂತರದ 5 ಪ್ರತಿಶತ ಅಭ್ಯರ್ಥಿಗಳಿಗೆ ಟ್ಯೂಶನ್ ಶುಲ್ಕ 50% ಕಡಿತವಿದ್ದು, ಕೊನೆಯ 5 ಪ್ರತಿಶತ ಅಭ್ಯರ್ಥಿಗಳಿಗೆ 25% ಕಡಿತವಿದೆ, ಅಂತೆಯೇ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಮಣಿಪಾಲದ ಕೌಶಲಾಭಿವೃದ್ಧಿ ಕೇಂದ್ರ ( MSDC) ವತಿಯಿಂದ ಒಂದು ಸ್ಕಿಲ್ ಸರ್ಟಿಫಿಕೇಟ್ ಕೋರ್ಸ್ ಸಂಪೂರ್ಣ ಉಚಿತವಾಗಿ ದೊರೆಯಲಿದೆ. ನೋಂದಾವಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಮೇ 23 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಪರೀಕ್ಷೆ ನೊಂದಾವಣೆಗೆ ಕಾಲೇಜು ವೆಬ್ ಸೈಟ್ WWW.UPMCMANIPAL.ORG ನಲ್ಲಿ ವೀಕ್ಷಿಸಿ ಅರ್ಜಿ ಸಲ್ಲಿಸಬಹುದಾಗಿದೆ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಲೇಜು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.