Header Ads Widget

ಯಕ್ಷಾಂಬುಧಿ ಯಲ್ಲಿ ಮಿಂದು ಬಂದವರು ಎಂ . ಲಕ್ಷ್ಮೀನಾರಾಯಣ ಸಾಮಗರು. ~ ರಾಜೇಶ್ ಭಟ್ ಪಣಿಯಾಡಿ .

 

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಮ್ಮೇಳನ

ಯಕ್ಷಾಂಬುಧಿ ಯಲ್ಲಿ ಮಿಂದು ಬಂದವರು  ಎಂ . ಲಕ್ಷ್ಮೀನಾರಾಯಣ ಸಾಮಗರು. ಅವರಿರುವು ಎಲ್ಲೇ ಇರಲಿ... ಅಲ್ಲಿ ಸದಾ ಮೂಗಿಗೆ ಬಡಿಯುವ ಯಕ್ಷ ಮಕರಂದ ದ ಸುಮಧುರ ಪರಿಮಳ. ಅವರು ಬೆಳೆದ ವಾತಾವರಣವೇ ಅಂತದ್ದು, ಯಕ್ಷ ಹೂದೋಟ ವದು. ಮನೆಯೇ ಯಕ್ಷ ದೇಗುಲ. ತಂದೆ... ಯಕ್ಷಕಲೆ ಯ ದಿಗ್ಗಜ ಮಲ್ಪೆ ಶಂಕರನಾರಾಯಣ ಸಾಮಗ ... ಸಾಮಗರು ಹುಟ್ಟಿದ್ದು ಜನವರಿ 31, 1949, ರುಕ್ಮಿಣೀ ಕರಾರ್ಚಿತ ಬಾಲಕೃಷ್ಣ ಕಾಲಿಟ್ಟ ಕಡಲ ತೀರದ ನಾಡು ಮಲ್ಪೆ  . 


ಸ್ಪಷ್ಟ ಸಿರಿಗನ್ನಡ ದ ಇಂಗ್ಲಿಷ್ ಶಿಕ್ಷಕ. ಈ ಗಂಧದ ಗುಡಿಯ ಕನ್ನಡ ನುಡಿ ಇವರ ಬಾಯಿಯಿಂದ ಹೊರ ಹೊಮ್ಮಿದರೆ ವಾತಾವರಣವಿಡೀ ಸಿರಿಗಂಧದ ಪರಿಮಳ.. ಆಲಿಸುವವರೆಲ್ಲರೂ ಮಂತ್ರಮುಗ್ಧರಾಗಬೇಕು. ಭಾಷತ್ರಯಗಳಲ್ಲೂ ಪ್ರೌಢಿಮೆ ಮೆರೆವ ವಾಕ್ ಚತುರ .. ಅದ್ಭುತ ಜ್ಞಾನ ಸಿಂಧೂರ ...


ಬದುಕನ್ನು ಸುಂದರವಾಗಿಸಿತು ಕಲಿತ ವಿದ್ಯೆ... ಇಂಗ್ಲಿಷ್ ಎಂ.ಎ. ಮತ್ತು ಎಫ್. ಎ. ಜಿ. ಇ.  . ಜೊತೆಗೆ ಇವರ ಅಂತರ್ ಶಕ್ತಿ ಗನುಗುಣವಾಗಿ ದೊರಕಿತು ಜೀವನ ವೃತ್ತಿ. ಮೊದಲ ಒಂದೈದು ವರ್ಷ ವಿಜಯಾ ಕಾಲೇಜು, ಮುಲ್ಕಿಯಲ್ಲಿ. ಮತ್ತೆ ಮೂವತ್ತೆರಡು ವರ್ಷ , ನಿವೃತ್ತಿಯವರೆಗೂ ಮುಂದುವರಿದಿತ್ತು ಈ ವೃತ್ತಿ ಉಡುಪಿಯ ಹೆಸರಾಂತ ಎಂ.ಜಿ. ಎಮ್. ಮಹಾವಿದ್ಯಾಲಯದಲ್ಲಿ.  ಕೊನೆಯ ಮೂರು ವರ್ಷ ದಲ್ಲಿ ಪ್ರಾಧ್ಯಾಪಕನಾಗಿ ಸಿಕ್ಕ ಬಡ್ತಿ ವೃತ್ತಿನಿವೃತ್ತಿಗೊಂದಷ್ಟು ಹೊಳಪಿನ ಒಪ್ಪ ನೀಡಿತ್ತು.


ಜೊತೆಗೆ ಯಕ್ಷಗಾನ/ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಅಂಗ ಸಂಸ್ಥೆಗಳ ಸದಸ್ಯತ್ವ ಹಾಗೂ ಸಭಾಪ ತಿತ್ವ. ಕಲಾಕ್ಷೇತ್ರದಲ್ಲಿ ವ್ಯಕ್ತಿಗತ ಸುವರ್ಣ ಸಂಭ್ರಮ.. 50 ವರ್ಷಗಳಲ್ಲಿ ಯಕ್ಷ ದಿಗ್ಗಜರೊಡನೆ ಒಡನಾಟ, ಬಯಲಾಟ, ಹಿರಿಯ ಶ್ರೇಷ್ಟ ಅರ್ಥದಾರಿಗಳೊಂದಿಗೆ ತಾಳಮದ್ದಲೆ ಕೂಟ, ಚರ್ಚಾಕೂಟ, ಯಕ್ಷ ಶಿಕ್ಷಣ ದ ಪಾಠ ಇವೆಲ್ಲ ನಿತ್ಯ ಪರಿಪಾಠ. ಯಕ್ಷಗಾನದ ತೆಂಕುತಿಟ್ಟು ಬಡಗು ತಿಟ್ಟು ಎರಡು ಪ್ರಕಾರಗಳನ್ನೂ ಅರಗಿಸಿ ಕುಡಿದವರು ಇವರು. 


ಇನ್ನು ಡಾ.ಶಿವರಾಮ ಕಾರಂತ ಹಾಗೂ ಬಿ.ವಿ.ಕಾರಂತರೆಂಬ ಕಾರಂತ ದ್ವಯರ ಗರಡಿಯಲ್ಲಿ ಪಳಗಿದ ವರು ಸಾಮಗರು. ಇವರ ಕಲಾ ಪ್ರೌಢಿಮೆ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿರದೆ ನಾಟಕರಂಗದಲ್ಲೂ ಬಣ್ಣ ಹಚ್ಚಿದವರು. ಉದ್ಯಾವರ ಮಾಧವಾಚಾರ್ಯರ ಹಲವು ನಾಟಕಗಳು ನೃತ್ಯ ರೂಪಕಗಳು ಇದಕ್ಕೆ ಸಾಕ್ಷಿ. 


ಸಾಮಗರು ಗಮಕ ಕಲೆಯ ವ್ಯಾಖ್ಯಾನ ಕಾರರು ಕೂಡ. ಹಲವು ಸಭಾ ಸಂಭ್ರಮಗಳ ಯಶಸ್ವಿ ಸಂಘಟಕ. ಕಥೆ,ಕವನ ,ಯಕ್ಷ ವಿಷಯಗಳ ಕೃತಿ ಲೇಖನಗಳ ಲೇಖಕ. ಜಿಲ್ಲಾ ರಾಜ್ಯೊತ್ಸವ ರಂತ ಹಲವಾರು ರಂಗ ಪುರಸ್ಕಾರಗಳ ಸರದಾರ. ದೇಶ ವಿದೇಶಗಳಲ್ಲಿ ಯಕ್ಷಗಾನ ಇತ್ಯಾದಿ ಕಲೆಯ ಸೊಬಗನ್ನು ಹರಡಿದ ಕಲಾ ರತ್ನ .


ಮನೆಯೊಳಗೆ ಹೊರಗೆ ನಾರಾಯಣನಿಗೆ ತಕ್ಕ ಲಕ್ಷ್ಮಿ ಪ್ರತಿಭಾ ಸಾಮಗ  ಸಾರ್ಥಕ ನಾಮಧೇಯ . ಇನ್ನು ಇವರಿಬ್ಬರ ಜೀವನಕ್ಕೆ ಹರ್ಷ ತಂದ ಹರ್ಷನೂ ಕಲಾವಿದ ಕಲಾರಾಧಕ. ಕಲೆಗಾಗಿ ಮುಡಿಪಾಗಿಟ್ಟ ನಿಮ್ಮ ಜೀವನ ವೈಖರಿ ಹಾಗೂ ಸಾಧನೆ  ಸದಾ ಸ್ಮರಣೀಯ.


ತಾವು ಈ ಬಾರಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ  15ನೇ ಸಾಹಿತ್ಯ ಸಮ್ಮೇಳನ "ಕಲಾಯತನ " ದ ಸರ್ವಾಧ್ಯಕ್ಷ ರಾಗಿರುವುದು ನಮ್ಮ ಉಡುಪಿಯ ಕನ್ನಡ ಕಲಾ ಕುಸುಮಗಳಿಗೆ ಅತ್ಯಂತ ಹೆಮ್ಮೆಯ ವಿಷಯ ಮತ್ತು ಇದು ನಮ್ಮೆಲ್ಲರ ಸೌಭಾಗ್ಯ. 


ಲೇಖನಿಯಿಂದ: ರಾಜೇಶ್ ಭಟ್ ಪಣಿಯಾಡಿ .