Header Ads Widget

ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಗುರುವಂದನಾ ಕಾರ್ಯಕ್ರಮ

ಶ್ರೀ ಕೃಷ್ಣ ಬಾಲನಿಕೇತನ, ಕುಕ್ಕಿಕಟ್ಟೆ ಉಡುಪಿ ಇಲ್ಲಿ ಗುರುಪೂರ್ಣಿಮಾದ ಅಂಗವಾಗಿ ಗುರು ವಂದನೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಬಾಳಗಾರು ಶ್ರೀಮದಾರ್ಯ ಆಕ್ಷೋಭ್ಯತೀರ್ಥ ಮೂಲಸಂಸ್ಥಾನದ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ಆಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದಂಗಳವರು ಆಗಮಿಸಿ ಬಾಲನಿಕೇತನದ ಮಕ್ಕಳು ಮತ್ತು ನೆರೆದ ಶಿಕ್ಷಕರನ್ನು ಹರಸಿದರು. ಮಕ್ಕಳಿಗೆ ಶ್ರೀ ಕೃಷ್ಣ ನ ಉದಾಹರಣೆ ನೀಡಿ ಗುರುಗಳ ಮಹತ್ವ ವನ್ನು ತಿಳಿಸಿ ದರು.

ಕಾರ್ಯಕ್ರಮದಲ್ಲಿ ಯೋಗ ತಜ್ಞೆ ಮತ್ತ್ತು ಶಿಕ್ಷಕಿ ಶೋಭಾ ಶೆಟ್ಟಿ ಯವರು ಖ್ಯಾತ ಯೋಗ ಗುರುಗಳಾದ ಡಾ ಬಿ ಕೆ ಎಸ್ ಅಯ್ಯಂಗಾರ್ ಅವರ ಬಗ್ಗೆ ತಿಳಿಸಿದರು. ಬಾಲನಿಕೇತನ ದ ಮಕ್ಕಳು ಕುಕ್ಕಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಯ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ ಮತ್ತು ಇತರ ಶಿಕ್ಷಕಿಯರು, ಇಂದಿರಾನಗರ ಸರಕಾರಿ ಪ್ರೌಢಶಾಲೆ ಯ ಮುಖ್ಯ ಶಿಕ್ಷಕ ಶ್ರೀ ಗಿರೀಶ್ ನಾಯ್ಕ ಮತ್ತು ಇತರ ಶಿಕ್ಷಕಿಯರಿಗೆ, ಶ್ರೀ ಬಾಲಕೃಷ್ಣ ರಾವ್, ಶ್ರೀಮತಿ ಸೌಮ್ಯ ಅವರುಗಳಿಗೆ ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮ ದಲ್ಲಿ ಆಡಳಿತ ಮಂಡಳಿ ಯ ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಶ್ರೀಯುತರುಗಳಾದ ರಾಘವೇಂದ್ರ ರಾವ್, ರಘುರಾಮ ಆಚಾರ್ಯ, ಎಸ್ ವಿ ಭಟ್, ಬಿ ಕೆ ನಾರಾಯಣ, ಸುಬ್ರಮಣ್ಯ ಕಾರಂತ್, ಗುರುರಾಜ್ ಭಟ್, ಶ್ಯಾಮಲಪ್ರಸಾದ್, ಮಾತಾಜಿಯವರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಸಮರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು