Header Ads Widget

ಉಡುಪಿಯಲ್ಲೊಂದು ವಿಭಿನ್ನ ನಿಶ್ಚಿತಾರ್ಥ!

ನಿಶ್ಚಿತಾರ್ಥದ ಬಗ್ಗೆ ಅನೇಕರಿಗೆ ತಮ್ಮದೇ ಆದ ಕನಸುಗಳಿರುತ್ತವೆ. ಆದರೆ ಉಡುಪಿಯಲ್ಲೊಂದು ವಿಭಿನ್ನವಾದ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಮನೆಯವರು ಕುಟುಂಬಸ್ಥರಿಗೆಲ್ಲ ನಿಮ್ಮೆಲ್ಲ ಕೆಲಸಗಳಿಗೆ ರಜೆ ಹಾಕಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಹ್ವಾನ ನೀಡಿದ್ರು. ಆದರೆ ವಿಚಿತ್ರ ಏನು ಅಂದ್ರೆ.. ತಮ್ಮದೇ ನಿಶ್ಚಿತಾರ್ಥಕ್ಕೆ ಹಾಜರಾಗಲು ವರನಿಗೆ ರಜೆ ದೊರಕಿರಲಿಲ್ಲ…!

ಕಚೇರಿಯಲ್ಲಿ ತಮ್ಮದೇ ನಿಶ್ಚಿತಾರ್ಥಕ್ಕೆ ತೆರಳಲು ರಜೆ ದೊರಕದ ಹಿನ್ನೆಲೆಯಲ್ಲಿ ಯುವಕ ಹಾಗೂ ಯುವತಿ ಆನ್ಲೈನ್ ವಿಡಿಯೋ ಮೂಲಕ ಬ್ರಾಹ್ಮಣ ಸಂಪ್ರದಾಯದಂತೆ ಉಂಗುರ ವಿನಿಮಯ ಮಾಡಿಕೊಂಡಿದ್ದಾರೆ. ಉಡುಪಿಯಲ್ಲಿ ಈ ವಿಭಿನ್ನವಾದ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಸುಹಾಸ್ ಹಾಗೂ ಉಡುಪಿಯ ಕಾತ್ಯಾಯಿನಿ ನಡುವೆ ವರ್ಚುವಲ್ ಎಂಗೇಜ್ಮೆಂಟ್ ನಡೆದಿದೆ. ಕಾತ್ಯಾಯಿನಿ ವೇದಿಕೆಯಲ್ಲಿದ್ದರೆ ಸುಹಾಸ್ ವಿದೇಶದಲ್ಲಿದ್ದುಕೊಂಡು ಎಂಗೇಜ್ಮೇಂಟ್ ಶಾಸ್ತ್ರ ನೆರವೇರಿಸಿದ್ದಾರೆ.

ಬೆಂಗಳೂರಿನಲ್ಲಿ ಬಿ.ಇ ವ್ಯಾಸಂಗ ಮುಗಿಸಿ ಸದ್ಯ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸುಹಾಸ್ ಮದುವೆ ದಿನಾಂಕ ಜನವರಿ 7 ಹಾಗೂ 8ರಂದು ನಿಗದಿಯಾಗಿತ್ತು. ಮದುವೆಗೆ ರಜೆ ಕೊರತೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಮ್ಮದೇ ನಿಶ್ಚಿತಾರ್ಥಕ್ಕೆ ಬಾರದೇ ಇರಲು ಸುಹಾಸ್ ನಿರ್ಧರಿಸಿದ್ದಾರೆ. ಹೀಗಾಗಿ ಉಡುಪಿಯ ಸರಸ್ವತಿ ಸಭಾಭವನದಲ್ಲಿ ವಿಭಿನ್ನವಾದ ನಿಶ್ಚಿತಾರ್ಥ ನಡೆದಿದೆ.

ಕುಟುಂಬಸ್ಥರೆಲ್ಲ ಈ ನಿಶ್ಚಿತಾರ್ಥ ಸಮಾರಂಭಕ್ಕೆ ಹಾಜರಾಗಿ ವಧು ವರರನ್ನು ಆಶೀರ್ವದಿಸಿದ್ದಾರೆ. ಉಡುಪಿಯಲ್ಲಿ ಬೆಳಗಿನ ಸಮಯದಲ್ಲಿ ಕೆನಡಾದಲ್ಲಿ ಮಧ್ಯರಾತ್ರಿಯಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು