ಖಾಸಗಿ ಬಸ್ಸುಗಳೆರಡು ಮುಖಾಮುಖಿ ಹೊಡೆದು ಹಲವರು ಪ್ರಯಾಣಿಕರು ಗಾಯಗೊಂಡ ಘಟನೆ ಎಂಜಿಎಂ ಬಳಿ ಜು. 15 ರಂದು ಮಂಗಳವಾರ ಬೆಳಗ್ಗೆ ನಡೆದಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಹಾಗೂ ಉಡುಪಿಯಿಂದ ಮಣಿಪಾಲದ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸುಗಳ ನಡುವೆ ಅಪಘಾತ ನಡೆದಿದೆ.
ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸಂಚಾರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯಿಂದಾಗಿ ಕೆಲವು ಹೊತ್ತು ಸಂಚಾರ ದಟ್ಟನೆ ಕಂಡುಬಂದು. ಸ್ಥಳೀಯರು ದಟ್ಟನೆ ನಿಯಂತ್ರಿಸಲು ಯತ್ನಿಸಿದರು.
0 ಕಾಮೆಂಟ್‌ಗಳು