Header Ads Widget

ಬೈಂದೂರು: ದನಗಳ್ಳರ ಬಂಧನ!

ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ದನ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್‌ ಶಂಕರ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್‌ ಹಾಗೂ ಪರಮೇಶ್ವರ ಹೆಗಡೆ ಉಡುಪಿ ಜಿಲ್ಲೆ ಮತ್ತು ಶ್ರೀ ಹೆಚ್‌ ಡಿ ಕುಲಕರ್ಣಿ ಉಪಾಧೀಕ್ಷಕರು ಕುಂದಾಪುರ ಉಪ ವಿಭಾಗರವರ ನಿರ್ದೇಶನದಂತೆ ಶ್ರೀ ಸವೀತ್ರತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನೇತೃತ್ವದಲ್ಲಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮತ್ತು ಪತ್ತೆಗೆ 3 ತಂಡಗಳಾಗಿ ನೇಮಕ ಮಾಡಿದ್ದು, ತಂಡದ ನೇತೃತ್ವವನ್ನು ಶ್ರೀ ತಿಮ್ಮೇಶ್ ಬಿ ಎನ್, ಪಿ.ಎಸ್.ಐ., ಶ್ರೀ ನವೀನ ಬೋರಕರ ಪಿ.ಎಸ್.ಐ., ಬೈಂದೂರು ಠಾಣೆ , ಶ್ರೀ ವಿನಯ ಪಿ.ಎಸ್.ಐ., ಕೊಲ್ಲೂರು ಠಾಣೆ , ಶ್ರೀ ಬಸವರಾಜ್‌ ಪಿ.ಎಸ್.ಐ. ಗಂಗೋಳ್ಳಿ ಠಾಣೆ ಮತ್ತು ಸಿಬ್ಬಂದಿಯವರಾದ ನಾಗೇಂದ್ರ, ಮೋಹನ, ಸುರೇಶ್‌, ಚೇತನ್‌, ಜಯರಾಮ, ಸತೀಶ್‌, ಚಿದಾನಂದ, ಮಾಳಪ್ಪ ದೇಸಾಯಿ, ಶ್ರೀಧರ ಪಾಟೀಲ್‌, ಪರಯ್ಯ ಮಠಪತಿರವರ ತಂಡ

ಬೈಂದೂರು ಠಾಣೆಯ ಅಪರಾಧ ಕ್ರಮಾಂಕ : 128/2025 ಕಲಂ. 303(2) BNS-4,5,7,12 Koarnataka Prevention of Cow Slaughter & Cattle Prevention Act 2020 and Prevention of Cruelty to Animals Act1960 U/s 11,(1)(D) ಮತ್ತು ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 130/2025 ಕಲಂ. 303(2) BNS, 4,5,7,12 Karnataka Prevention of Cow Slaughter & Cattle Prevention Act 2020 and Prevention of ruelty to Animals Act 1960 U/s. 11,(1)(D) ಪ್ರಕರಣಗಳಲ್ಲಿ ಆರೋಪಿತರಾದ ಮೊಹಮ್ಮದ ಕೈಪ್‌ ಸಾಸ್ತಾನ ಮತ್ತು ಮೊಹಮ್ಮದ ಸುಹೇಲ್‌ ಖಾದರ, ಉಚ್ಚಿಲ ಕಾಪುರವರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದರಿ ಪ್ರಕರಣಗಳಲ್ಲಿ ದನವನ್ನು ಕಳವು ಮಾಡಿ ಸಾಗಾಟ ಮಾಡಿದ KA19MD5956 ECO SPORT CAR ̧ KA47M8960 BREZZA CAR ̧ KA 20 N 6915 MARUTHI SWIFT ಕಾರನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದೆ. ಅಲ್ಲದೇ ಸದ್ರಿ ಕಾರಿನಲ್ಲಿ ಸಾಗಾಟ ಮಾಡಿದ 4 ದನಗಳನ್ನು ರಕ್ಷಿಸಿ ಗೋಶಾಲೆ ಬಿಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು