Header Ads Widget

ಮಾಧವ ಕೃಪಾ ಶಾಲೆ ಮತ್ತು ಶಾರದಾ ರೆಸಿಡೆನ್ಶಿಯಲ್ ಶಾಲೆಯಲ್ಲಿ ಯೋಗ ಸಮಾವೇಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಹಾಗೂ ಮಣಿಪಾಲ್‌ ಇಂಟೆಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ (ಸಿ ಐ ಎಂ ಆರ್) ಕೇಂದ್ರದ ಯೋಗ ವಿಭಾಗವು ಮಾಧವ ಕೃಪಾ ಶಾಲೆ (ಎಂ ಕೆ ಎಸ್), ಮಣಿಪಾಲ ಮತ್ತು ಶಾರದಾ ರೆಸಿಡೆನ್ಷಿಯಲ್ ಶಾಲೆ (ಎಸ್ ಆರ್ ಎಸ್), ಕುಂಜಿಬೆಟ್ಟು, ಉಡುಪಿ ಇದರ ಸಹಯೋಗದಲ್ಲಿ, ಅಂತರಾಷ್ಟ್ರೀಯ ಯೋಗ ದಿನಾಚರಣೆ 2025 ರ ಭಾಗವಾಗಿ ಯೋಗ ಸಮಾವೇಶ ಎಂಬ ಸಮಗ್ರ ಕಾರ್ಯಕ್ರವನ್ನು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಸಂಸ್ಥೆ ಬೆಂಬಲ ನೀಡಿತು.

ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ರಾಷ್ಟ್ರೀಯ ವಿಷಯದಡಿಯಲ್ಲಿ, ಈ ಕಾರ್ಯಕ್ರಮವು ಜೂನ್ 12ರಂದು ಶಾರದಾ ರೆಸಿಡೆನ್ಷಿಯಲ್ ಶಾಲೆ ಮತ್ತು ಜೂನ್ 18ರಂದು ಮಾಧವ ಕೃಪಾ ಶಾಲೆಯಲ್ಲಿ ನಡೆಯಿತು. ಮತ್ತು ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಗಿಂತ ಹೆಚ್ಚಿನ ಯಶಸ್ವಿಯಾಗಿ ಮುಂದುವರಿಯಿತು. ಇದು ಮಕ್ಕಳ ದಿನಚರಿಯಲ್ಲಿ ಯೋಗವನ್ನು ನಿರಂತರವಾಗಿ ಸೇರಿಸುವ ದೂರದೃಷ್ಟಿಯ ಮಹತ್ವವನ್ನು ಒತ್ತಿ ಹೇಳಿತು.


ಎರಡು ಶಾಲೆಗಳ 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಸಂಸ್ಥೆಯ ಮಕ್ಕಳಿಗಾಗಿ ಯೋಗ ಮಾದರಿಯ ಆಧಾರದ ಮೇಲೆ ಆಸನ, ಪ್ರಾಣಾಯಾಮ, ಧ್ಯಾನ, ಮತ್ತು ಒತ್ತಡ ನಿರ್ವಹಣೆಯ ಪರಿಹಾರ ಕ್ರಮಗಳ ಸಂವಾದಗಳಲ್ಲಿ ಭಾಗವಹಿಸಿದರು. ಈ ಕ್ರಿಯೆಗಳು ಶಾಂತ ಮನಃಸ್ಥಿತಿ, ಭಾವನೆಗಳ ನಿಯಂತ್ರಣ, ಒತ್ತಡದ ನಿರ್ವಹಣೆ, ಓದು ಪ್ರಭಾವ ಮತ್ತು ಒಟ್ಟು ಯೋಗಕ್ಷೇಮ ಮೊದಲಾದ ವಿಷಯಗಳ ಕುರಿತು ಈ ಕಾರ್ಯಕ್ರಮದಲ್ಲಿ ಸಂವಾದ ಮಾಹಿತಿಗಳ ಬದಲಾವಣೆ ನಡೆಯಿತು.

ಜುಲೈ 2, 2025ರಂದು ಶಾರದಾ ರೆಸಿಡೆನ್ಷಿಯಲ್ ಶಾಲೆ ಯಲ್ಲಿ ಆಯೋಜಿಸಲಾದ ಸಮಾರೋಪ ಸಮಾರಂಭದಲ್ಲಿ, ಕಸ್ತೂರಬಾ ಆಸ್ಪತ್ರೆ, ಮಣಿಪಾಲ್‌ನ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮತ್ತು ಶಾರದಾ ರೆಸಿಡೆನ್ಷಿಯಲ್ ಶಾಲೆಯ ನಿರ್ದೇಶಕ ವಿದ್ವಾನ್ ವಿದ್ಯವಂತಾಚಾರ್ಯರು ಗೌರವಾನ್ವಿತ ಅತಿಥಿಯಾಗಿ ಉಪಸ್ಥಿತರಿದ್ದರು.

ಡಾ. ಅವಿನಾಶ್ ಶೆಟ್ಟಿಯವರು ಮಾತನಾಡಿ ಹೆಚ್ಚುತ್ತಿರುವ ಬದಲಾದ ಜೀವನಶೈಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದು ಮುಖ್ಯವಾಗಿ ಸಕ್ಕರೆ ಕಾಯಿಲೆ, ಬೊಜ್ಜು. ಅಧಿಕ ರಕ್ತದೊತ್ತಡ, ಹೈಪರ್ ಟೆನ್ಶನ್ ಮೊದಲಾದವುಗಳನ್ನು ತಡೆಯುವಲ್ಲಿ ದೈನಂದಿನ ಯೋಗ ಪ್ರಮುಖ ಪಾತ್ರವಹಿಸುವುದರ ಕುರಿತು ವಿವರಿಸಿದರು. ವಿದ್ವಾನ್ ಅಚಾರ್ಯರು ಕಾರ್ಯಕ್ರಮವನ್ನು ಪ್ರಶಂಸಿಸಿ ಶಾಲೆಯ ಮೌಲ್ಯಾಧಾರಿತ ಪಾಠ್ಯಕ್ರಮದಲ್ಲಿ ಯೋಗವನ್ನು ಮುಂದುವರೆಸುವುದಾಗಿ ಹೇಳಿದರು. ಶಾರದ ರೆಸಿಡೆನ್ಸಿಯಲ್ ಶಾಲೆ ಯ ಪ್ರಿನ್ಸಿಪಲ್ ವಿನ್‌ಸೆಂಟ್ ಡಿಕೊಸ್ಟಾ ಅವರು ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲವನ್ನು ನೀಡಿದರು.

ಜುಲೈ 3, 2025 ರಂದು ಮಾಧವ ಕೃಪಾ ಶಾಲೆ ಆಯೋಜಿಸಲಾದ ಸಮಾರೋಪ ಸಮಾರಂಭದಲ್ಲಿ, ಕಸ್ತೂರಬಾ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ. ಸುನೀಲ್ ಸಿ ಮುಂಡ್ಕೂರ್ ಮುಖ್ಯ ಅತಿಥಿಯಾಗಿ ಮತ್ತು ಮಾಧವ ಕೃಪಾ ಶಾಲೆಯ ಪ್ರಿನ್ಸಿಪಲ್ ಶ್ರೀಮತಿ ಸ್ವಾತಿ ಸುಧಾಕರ್ ಕುಲಕರ್ಣಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.

 ಡಾ. ಮುಂಡ್ಕೂರ್ ಅವರು ಯೋಗದ ವೈಜ್ಞಾನಿಕ ಮಹತ್ವವನ್ನು ಒತ್ತಿ ಹೇಳಿ ಅದು ಯುವಜನರ ಗಮನ, ನಿದ್ರೆ ಮತ್ತು ಭಾವನೆಗಳ ಸ್ಥಿರತೆ ಮೇಲೆ ಯಾವ ರೀತಿಯಾಗಿ ಪರಿಣಾಮಕಾರಿ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ವಿವರಿಸಿದರು. 

 ಶ್ರೀಮತಿ ಕುಲಕರ್ಣಿಯವರು ಯೋಗ ಬೋಧಕರಿಗೆ ಕೃತಜ್ಞತೆ ಸಲ್ಲಿಸಿ ಮಕ್ಕಳಲ್ಲಿ ಧೈರ್ಯ ಮತ್ತು ಶಿಸ್ತು ವೃದ್ಧಿ ಆಗಿರುವುದನ್ನು ಒತ್ತಿ ಹೇಳಿ ಅಭಿನಂದಿಸಿದರು.

ಎಂಕೆಎಸ್ ಪ್ರತಿನಿಧಿ ಶ್ರೀಮತಿ ರಾಧಿಕಾ ಪೈ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ತಮ್ಮ ಪೂರ್ಣ ಬೆಂಬಲವನ್ನು ನೀಡಿದರು.

 ಡಾ. ನೀತಿನಕುಮಾರ್ ಜೆ. ಪಾಟೀಲ್ ಅವರು ಕಾರ್ಯಕ್ರಮ ವರದಿಗಳನ್ನು ಪ್ರಸ್ತುತಪಡಿಸಿದರು. ಇವರು ಮಾಹೆಯ ಸಿ ಐ ಎಂ ಆರ್ ಯೋಗ ವಿಭಾಗದ ಬೋಧಕರಾಗಿದ್ದು ಅಂತರಾಷ್ಟ್ರೀಯ ಯೋಗ ದಿನಾಚರಣೆ 2025 ರ ನೊಡಲ್ ಅಧಿಕಾರಿಯಾಗಿದ್ದಾರೆ. ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಅನ್ನಪೂರ್ಣ ಕೆ, ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಎರಡೂ ಸ್ಥಳಗಳ ವಿದ್ಯಾರ್ಥಿಗಳ ಏಕಾಗ್ರತೆ, ಭಾವನಾತ್ಮಕ ಯೋಗಕ್ಷೇಮ ಮತ್ತು ದೈಹಿಕ ನಮ್ಯತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಪ್ರತಿಬಿಂಬಿಸಿವೆ.

ಈ ಮಹತ್ವಪೂರ್ಣ ಯೋಜನೆಯು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜಾಗತಿಕ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತದೆ. ಅವರ ನಾಯಕತ್ವವು ಯೋಗವನ್ನು ಆರೋಗ್ಯ, ಶಿಕ್ಷಣ ಮತ್ತು ಅಂತರರಾಷ್ಟ್ರೀಯ ಸಹಕಾರದಲ್ಲಿ ಮುಂಚೂಣಿಗೆ ತಂದಿದೆ. ಶೈಕ್ಷಣಿಕ ಪರಿಸರ ವ್ಯವಸ್ಥೆಗಳಲ್ಲಿ ಯೋಗವನ್ನು ಅಳವಡಿಸುವ ಅವರ ಕರೆಯು ಎಂಕೆಎಸ್ ಮತ್ತು ಎಸ್‌ಆರ್‌ಎಸ್ ನಂತಹ ಸಂಸ್ಥೆಗಳಿಗೆ ಆರೋಗ್ಯಕರ, ಉತ್ತಮ ಪೀಳಿಗೆಯ ರೂಪೀಕರಣಕ್ಕೆ ಇದು ಸಹಾಯ ಮಾಡುತ್ತದೆ.

ಯೋಗ ಸಮಾವೇಶ 2025 ಕೇವಲ ಒಂದು ಸಮಾರಂಭ ಮಾತ್ರವಲ್ಲ – ಅದು ಒಂದು ಪರಿವರ್ತನೆಯ ಆರೋಗ್ಯ ಚಳವಳಿಯಾಗಿ ಪರಿಣಮಿಸಿ, ಮಕ್ಕಳಲ್ಲಿ ಶಿಸ್ತು, ಸಹನೆ ಮತ್ತು ಸಂಪೂರ್ಣ ಬೆಳವಣಿಗೆಗೆ ಮುನ್ನಡೆ ನೀಡಿದೆ. ಜೊತೆಗೆ ಆರೋಗ್ಯ ಮತ್ತು ಸಮಗ್ರ ಶಿಕ್ಷಣದ ಬದ್ಧತೆಯನ್ನು ಬಲಪಡಿಸಿತು.

ಯೋಗ ಸಮಾವೇಶ 2025 ಒಬ್ಬ ಸಮಾರಂಭ ಮಾತ್ರವಲ್ಲ – ಅದು ಒಂದು ಪರಿವರ್ತನೆಯ ಯೋಗ ಕ್ಷೇಮ ಚಳವಳಿಯಾಗಿ ಪರಿಣಮಿಸಿ, ಮಕ್ಕಳಲ್ಲಿ ಶಿಸ್ತು, ಸಹನೆ ಮತ್ತು ಸಂಪೂರ್ಣ ಬೆಳವಣಿಗೆಗೆ ಮುನ್ನಡೆ ನೀಡಿದೆ ಹಾಗೂ ಸಂಯೋಜಿತ ಶಿಕ್ಷಣ ಮತ್ತು ಪ್ರತಿಬಂಧಕ ಆರೋಗ್ಯದತ್ತ ಬದ್ಧತೆಯನ್ನು ಬಲಪಡಿಸಿದೆ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದು Institution of Eminence ಸ್ಥಾನಮಾನ ಪಡೆದ ಡೀಮ್‌ಡ್-ಟು-ಬಿ ಯೂನಿವರ್ಸಿಟಿ ಆಗಿದೆ. ಹೆಲ್ತ್ ಸೈನ್ಸ್, ಮ್ಯಾನೇಜ್ಮೆಂಟ್ ಲಾ, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್, ಹಾಗೂ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ 400 ಕ್ಕಿಂತ ಹೆಚ್ಚಿನ ವಿಶೇಷತೆಗಳನ್ನು ಮಾಹೆ ತನ್ನ ಅಂಗ ಸಂಸ್ಥೆಗಳ ಮೂಲಕ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೇದ್ ಪುರ ಹಾಗೂ ದುಬೈ ನ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಶ್ರೇಷ್ಠ ಶೈಕ್ಷಣಿಕ ದಾಖಲಾತಿ, ಆಧುನಿಕ ಮೂಲಸೌಕರ್ಯ, ಮತ್ತು ಪ್ರಮುಖ ಸಂಶೋಧನಾ ಕೊಡುಗೆಗಳೊಂದಿಗೆ ಮಾಹೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಮತ್ತು ಗೌರವ ಗಳಿಸಿದೆ. ಅಕ್ಟೋಬರ್ 2020ರಲ್ಲಿ ಭಾರತದ ಶಿಕ್ಷಣ ಸಚಿವಾಲಯ ಮಾಹೆ ಗೆ ಇನ್ಸ್ಟಿಟ್ಯೂಷನ್ ಆಫ್ ಎಮಿನೆನನ್ಸ್ ಸ್ಥಾನಮಾನ ನೀಡಿತು. ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ರ‍್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್‌ಎಫ್) ನಲ್ಲಿ ಮಾಹೆ ನಾಲ್ಕನೇ ಸ್ಥಾನದಲ್ಲಿ ಇದೆ . ಬದಲಾವಣೆಯ ಶಿಕ್ಷಣ ಹಾಗೂ ಸಮೃದ್ಧ ಕ್ಯಾಂಪಸ್ ಜೀವನಕ್ಕಾಗಿ ವಿದ್ಯಾರ್ಥಿಗಳ ಅಗ್ರ ಆಯ್ಕೆ ಮಾಹೆ ಆಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಿಗೂ ಶ್ರೇಷ್ಠ ಪ್ರತಿಭೆಗಳ ತಾಣವಾಗಿ ಮಾಹೆ ಗುರುತಿಸಲ್ಪಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು