ಉಡುಪಿ: ಸರಕಾರಿ ಬಾಲಕರ ಬಾಲ ಮಂದಿರದಿಂದ ಇಬ್ಬರು ಬಾಲಕರು ಓಡಿ ಹೋಗಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು ಕನಕನಗರದ ದಿಲೀಪ್ (14) ಹಾಗೂ ಬೆಂಗಳೂರು ರಾಜೇಶ್ವರಿ ನಗರದ ಧನರಾಜ್(13) ನಾಪತ್ತೆಯಾದ ಬಾಲಕರು. ಇವರು ಜು.7ರಂದು ಉಡುಪಿ ಸರಕಾರಿ ಬಾಲಕರ ಬಾಲ ಮಂದಿರಕ್ಕೆ ಸ್ವಾಗತ ಕೇಂದ್ರದ ಮೂಲಕ ದಾಖಲಾಗಿದ್ದು, ಜು.13ರಂದು ಮಧ್ಯಾಹ್ನ ಇವರಿಬ್ಬರು ಸಂಸ್ಥೆಯ ಕಾರಿಡರ್‌ನ ಬಾಗಿಲಿನಿಂದ ಓಡಿ ಹೋಗಿರುವುದಾಗಿ ಮಂದಿರದ ಗೃಹಪಾಲಕ ಪ್ರಮೋದ್ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು