ಉಡುಪಿ:- ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರೊಪೆಸರ್ ಸತೀಶ್ ಜಯರಾಮ್, ಪ್ರಾಂಶುಪಾಲರು, ವೆಲಕಮ್ ಗ್ರೂಪ್ ಗ್ರಾಜುವೇಟ್ ಸ್ಕೂಲ್ ಅಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್, ಮಣಿಪಾಲ ರವರು ಮಾತನಾಡುತ್ತಾ “ ಸತತ ಪ್ರಯತ್ನದಿಂದ ನಿಮ್ಮ ಜೀವನದ ದಾರಿ ಪ್ರಗತಿಯಲ್ಲಿರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಮತ್ತೋರ್ವ ಅತಿಥಿ ಎಲಿಝಾ ವಾಝ್ , ಪ್ರಾಂಶುಪಾಲರು ಕ್ರಿಸ್ಟ್ ಸ್ಕೂಲ್, ಮಣಿಪಾಲ ಮಾತನಾಡುತ್ತಾ ನಾವು ಮಾಡುವ ಕೆಲಸಗಳಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಗುರಿಯನ್ನು ಸಾಧಿಸಬೇಕು ಎಂದು ತಿಳಿಸಿದರು. ಕಾಲೇಜಿನ ನಿರ್ದೇಶಕರಾದ ವಿದ್ಯಾವಂತ ಆಚಾರ‍್ಯರವರು ಮಾತನಾಡುತ್ತ ನಾಯಕತ್ವ ಗುಣವನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳಸಿಗೊಂಡು ಪರಿಸರದ ಬಗ್ಗೆಯೂ ಕಾಳಜಿ ವಹಿಸಿ ಅಳಿಯುತ್ತಿರುವ ಪರಿಸರವನ್ನು ರಕ್ಷಿಸಿ ಜವಾಬ್ದಾರಿಯುತ ನಾಯಕನಾಗ ಬಹುದೆಂದು ಮಾರ್ಗದರ್ಶನ ನೀಡಿದರು.
ಕಾಲೇಜು ವಿದ್ಯಾರ್ತಿ ಸಂಘದ ನಾಯಕನಾಗಿ ಶಶಾಂಕ್ ಎಸ್ ಪ್ರಭು, ನಾಯಕಿಯಾಗಿ ಮಿಥಾಲಿ ಎಸ್ ರಾವ್ ಅಧಿಕಾರ ವಹಿಸಿಕೊಂಡರು. ಉಪನಾಯಕನಗಿ ಅದ್ನಾನ್ ಜಾಫರಿ ಹಾಗೂ ಉಪನಾಯಕಿಯಾಗಿ ಆದ್ಯ ಎಮ್. ಜೆ ನಿಯುಕ್ತಿಗೊಂಡರು. ಕಾಲೇಜಿನ ಪ್ರಾಂಶುಪಾಲರಾದ ವಿಕ್ರಮ್ ದೇವ್ ಪ್ರಭುರವರು ಸ್ವಾಗತಿಸಿದರು, ಶಶಾಂಕ್ ಎಸ್ ಪ್ರಭು ಧನ್ಯವಾದವಿತ್ತರು ಕಮಾರಿ ಹಸ್ವಿಫಾ ಮರಿಯಮ್ ಕಾರ‍್ಯಕ್ರಮ ನಿರೂಪಿಸಿದರು.
0 ಕಾಮೆಂಟ್‌ಗಳು