ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಹಡಿಲು ಭೂಮಿ ಕೃಷಿ ಯೋಜನೆಯ ಅಡಿಯಲ್ಲಿ ಕ್ರೀಡೆಯೊಂದಿಗೆ ಕೃಷಿ ಕಾರ್ಯ: "ಕೇಸರ್ಡ ಗೊಬ್ಬುಗ ಬೆನ್ನಿ ಮಲ್ಪುಗ" ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಭೂಮಿ ತಾಯಿಗೆ ಹಾಲನ್ನು ಎರೆಯುವ ಮೂಲಕ ಉದ್ಘಾಟಿಸಿದ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ದೇವಾಡಿಗ ಕೃಷಿಯ ಮಹತ್ವ ತಿಳಿಸುತ್ತಾ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕರಾದ ಜಲಜಕ್ಕ ಅಮ್ಮುಂಜೆ ಹಾಗೂ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಮೈಕಲ್ ಡಿಸೋಜಾ ರವರನ್ನು ಸಮ್ಮಾನಿಸಲಾಯಿತು.
ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಭೆ ಹಾಗು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನ್ ರೋಚ್, ಸುಂದರ ಛಾಯಾಗ್ರಾಹಕರಾದ ಸುಂದರ್ ಪೂಜಾರಿ, ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಂದೀಪ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಐರಿನ್, ಉಪ್ಪೂರು ವ್ಯ.ಸೇ.ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಉದ್ಯಮಿಗಳಾದ ಹೆನ್ರಿ ಡಿಸೋಜಾ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್, ಕಾರ್ಯಕ್ರಮ ಸಂಯೋಜಕರಾದ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಕುಮಾರ್, ಕೋಶಾಧಿಕಾರಿ ಅಶೋಕ್ ಉಪಸ್ಥಿತರಿದ್ದರು.
ಸ್ಪರ್ಧೆಗಳನ್ನು ಮಕ್ಕಳಿಗೆ, ಮಹಿಳೆಯರು ಹಾಗೂ ಪುರುಷರ ವಿಭಾಗದಲ್ಲಿ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ನಂತರ ಗದ್ದೆಯ ನಾಟಿ ಕಾರ್ಯ ನಡೆಸಲಾಯಿತು.
ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿ ಯೋಗೀಶ್ ಕೊಳಲಗಿರಿ ಹಾಗೂ ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರೆ ಸದಾಶಿವ ಕುಮಾರ್ ಸರ್ವರಿಗೂ ವಂದಿಸಿದರು.
0 ಕಾಮೆಂಟ್‌ಗಳು