Header Ads Widget

ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ

                                        

ಕನ್ನಡ ಮಾಧ್ಯಮ ಪ್ರೌಢ ಶಾಲೆ ಇನ್ನಂಜೆ ಇಲ್ಲಿನ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಶ್ರೀ ವಿಶ್ವನಾಥ ನಾಯ್ಕ್ ಪೇತ್ರಿ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾದಾಕೃಷ್ಣ ಎಸ್. ಐತಾಳ್ ಇವರು ವಹಿಸಿಕೊಂಡು ಸನ್ಮಾನಿತರ ಬಗ್ಗೆ ಗುಣಗಾನ ಮಾಡಿದರು. ಮುಖ್ಯ ಅತಿಥಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ನಿವೃತತರನ್ನು ಸನ್ಮಾನಿಸಿ ವೃತ್ತಿಯಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಟ ವಾದುದು. 


೩೪ ವರ್ಷಗಳ ಸೇವೆ ಸಲ್ಲಿಸಿದ ವಿಶ್ವನಾತ ನಾಯ್ಕರ ನಿವೃತ್ತ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸ್ರೀ ರತ್ನ ಕುಮಾರ್ ವಿಶ್ವನಾಥ ನಾಯ್ಕ್ ರ ಸೇವೆಯನ್ನು ನೆನಪಿಸಿಕೊಂಡು ಶುಭಾಶ ಯ ಕೋರಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀ ಮಾಲಿನಿ ಶೆಟ್ಟಿ, ಉಧ್ಯಮಿ ನವೀನ್ ಅಮಿನ್, ಎಸ್.ವಿ.ಎಸ್. ಆಂಗ್ಲ ಮಾಧ್ಯಮದ ಆಡಳಿತಾಧಿಕಾರಿ ಪ್ರಭಾವತಿ ಎಸ್. ಅಡಿಗ, ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷ ಮದುಸೂದನ್  ​ಆಚಾರ್ಯ, ಯುವತಿ ಮಂಡಲದ ಕಾರ್ಯದರ್ಶಿ ಪ್ರಭಾವತಿ ಆಚಾರ್ಯ, ಇನ್ನಂಜೆ ಸಾಮಾ ಜಿಕ ಸೇವಾ ಸಮಿತಿಯ ಅಧ್ಯಕ್ಷರಾದ ರವಿವರ್ಮ ಶೆಟ್ಟಿ, ಇನ್ನಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಉಪಸ್ಥಿತರಿದ್ದ ಸಮಾರಂಭದಲ್ಲಿ ಪ್ರಾಂಶುಪಾಲರಾದ ರಾಜೇಂದ್ರ ಪ್ರಭು ಸನ್ಮಾನ ಪತ್ರ ವಾಚಿಸಿದರು. ಪ್ರಭಾಕರ ಭಟ್ ವಿಶ್ವ ನಾಥ ನಾಯ್ಕರನ್ನು ಪರಿಚಯಿಸಿದರು. 


ಹಳೆ ವಿದ್ಯಾರ್ಥಿ ಶಶಿಕಲಾ ಆಚಾರ್ಯ ನಿವೃತ್ತರ ಬಗ್ಗೆ ಮಾತನಾಡಿದರು. ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಶ್ಥಿತರಿದ್ದರು. ಸಮಾರಂಭದಲ್ಲಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯರಾದ ನಟರಾಜ ಉಪಾದ್ಯಾಯ ಸ್ವಾಗತಿಸಿ​, ​ದೈಹಿಕ ಶಿಕ್ಷಕ ನವೀನ್ ಶೆಟ್ಟಿ ಧನ್ಯವಾದವಿತ್ತರು. ಅನಿತ ಮಥಾಯಸ್ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು