ಉಡುಪಿ ಘಟಕದ ನೇತೃತ್ವದಲ್ಲಿ ತೆಂಕುತಿಟ್ಟಿನ ಯಕ್ಷಗಾನ ತರಬೇತಿ ಕಾರ್ಯಕ್ರಮವು ಇಂದು ಬೆಳಿಗ್ಗೆ 10.00 ಘಂಟೆಗೆ ಶ್ರೀ ಮಹಿಷ ಮರ್ಧಿನಿ ದೇವಸ್ಥಾನ, ಬೈಲೂರು, ಉಡುಪಿಯಲ್ಲಿ ಶುಭಾರಂಭಗೊಂಡಿತು.
ದೀಪ ಪ್ರಜ್ವಲನದೊಂದಿಗೆ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀ ಮಟ್ಟಾರ್ ರತ್ನಾಕರ ಹೆಗ್ಡೆಯವರು ಯಕ್ಷಗಾನ ಕಲಿಕೆ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಾರಣ ಎಂದು ತಿಳಿಸಿದರು. ಬೈಲೂರು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಟ್ರಸ್ಟಿ ಶ್ರೀ ರಮೇಶ್ ಶೆಟ್ಟಿ ಕಳತ್ತೂರು ಶುಭ ಹಾರೈಸಿದರು. ಯಕ್ಷಗುರುಗಳಾದ ಜಯಕರ್ ಬೈಲೂರು ಹಾಗೂ ನಾರಾಯಣ ಪ್ರಭು ಗುಳ್ಮೆ, ಉಪಸ್ಥಿತರಿದ್ದರು. ಉಡುಪಿ ಘಟಕದ ಕಾರ್ಯದರ್ಶಿ ಡಾ.ಹರೀಶ್ ಜೋಶಿ ಕಾರ್ಯಕ್ರಮ ನಿರ್ವಹಿಸಿ, ಅಮಿತ ಕ್ರಮಧಾರಿ ವಂದಿಸಿದರು. ಕೋಶಾಧಿಕಾರಿ ಶ್ರೀ ತ್ರಿಲೋಚನ ಶಾಸ್ತ್ರೀ, ಘಟಕದ ಸದಸ್ಯರು ಉಪಸ್ಥಿತರಿದ್ದರು.
ಪ್ರತಿ ಭಾನುವಾರ ನಡೆಯುವ ನಾಟ್ಯ- ಹಿಮ್ಮೇಳ ತರಬೇತಿಗೆ ಆಸಕ್ತರು ಭಾಗವಹಿಸುವ ಅವಕಾಶ ಇದ್ದು, ಶ್ರೀ ಜಯಕರ ಬೈಲೂರು ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಪಟ್ಲ ಫೌಂಡೇಶನ್ ಟ್ರಸ್ಟ್ ಉಡುಪಿ ಘಟಕದ ವತಿಯಿಂದ ಉಚಿತವಾಗಿ ನಡೆಸಲ್ಪಡುವ ಈ ತರಬೇತಿಯ ಸದುಪಯೋಗವನ್ನು ಆಸಕ್ತರು ಪಡೆದುಕೊಳ್ಳಬೇಕಾಗಿ ವಿನಂತಿ.
0 ಕಾಮೆಂಟ್‌ಗಳು