ಶ್ರೀ ಪೇಜಾವರ ಹಾಗೂ ಶ್ರೀ ಶೀರೂರು ಶ್ರೀಪಾದರು ಇಂದು ತಮ್ಮ ಚಾತುರ್ಮಾಸ್ಯದ ಅಂಗವಾಗಿ ನಡೆದ ಶೋಭಾಯಾತ್ರೆ ಮುನ್ನ ಪೂಜ್ಯ ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ ಬೆಂಗಳೂರುಶ್ರೀ ಪುತ್ತಿಗೆ ಮಠಕ್ಕೆ ಚಿತ್ತೈಸಿ, ಶ್ರೀ ಗೋವರ್ಧನಧಾರಿಕೃಷ್ಣ ದೇವರ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶ್ರೀ ಮಠದಿಂದ ವಿಶೇಷ ಗೌರವಾದರಗಳನ್ನು ಉಭಯ ಶ್ರೀಪಾದಂಗಳರವರಿಗೆ ಮಾಡಲಾಯಿತು.
ಪೂಜ್ಯ ಶ್ರೀಗಳು ಗೋವರ್ಧನಧಾರಿ ವಿದ್ಯಾಪೀಠದ ಮಕ್ಕಳಿಗೆ ಮತ್ತು ನೆರೆದ ಭಕ್ತ ವೃಂದಕ್ಜೆ ಆಶೀರ್ವಚನವನ್ನು ಮಾಡಿದರು.
ಶ್ರೀಪಾದರ ಕಾರ್ಯದರ್ಶಿ ಪ್ರಸನ್ನಚಾರ್ಯ ಹಾಗೂ ಶ್ರೀಮಠದ ವ್ಯವಸ್ಥಾಪಕ ಎ ಬಿ ಕುಂಜಾರ ರವರು ಗೌರವಾರ್ಪಣೆಯನ್ನು ಸಲ್ಲಿಸಿದರು.
ಅಪೂರ್ವವಾದ ಗೋವರ್ಧನ ಗುಹಾದೇವಾಲಯನ್ನು ನೋಡಿದ ಭಾವಿ ಪರ್ಯಾಯ ಶ್ರೀಪಾದರು ಕೆತ್ತಿದ ಶ್ರೀಕೃಷ್ಣನ ಮಹಿಮಾಚಿತ್ರಗಳನ್ನು ನೋಡಿ ವಿಶೇಷವಾಗಿ ಮೆಚ್ಚಿಕೊಂಡರು.
0 ಕಾಮೆಂಟ್‌ಗಳು