Header Ads Widget

ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯ ಬಂಧನ

ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದಲ್ಲಿ ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 31/07/2025 ರಂದು ಬೆಳಿಗ್ಗಿನ ಜಾವ 01:50 ಗಂಟೆಯ ಸುಮಾರಿಗೆ ಮೇಲ್‌ ಗಂಗೊಳ್ಳಿ ಸಮೀಪ ಹೋಗುತ್ತಿರುವಾಗ ಒಂದು ಬಿಳಿ ಬಣ್ಣದ ಕಾರನ್ನು ತ್ರಾಸಿ ಕಡೆಗೆ ಮುಖಮಾಡಿ ನಿಲ್ಲಿಸಿದ್ದು ಆಗ ಇಬ್ಬರು ಮೇಲ್‌ ಗಂಗೊಳ್ಳಿಯ ಬಾಂಬೆ ಬಜಾರ್‌ ಎದುರು ರಸ್ತೆಯ ಬದಿಯಲ್ಲಿ ಮಲಗಿರುವ ದನವನ್ನು ಹಿಂಸಾತ್ಮಕವಾಗಿ ಹಿಡಿದುಕೊಂಡು ಕಾರಿನ ಹಿಂಬದಿ ಢಿಕ್ಕಿಗೆ ತುಂಬಿಸಿಕೊಂಡು ಕಾರನ್ನು ವೇಗವಾಗಿ ತ್ರಾಸಿ ಕಡೆಗೆ ಚಲಾಯಿಸಿಕೊಂಡಿದ್ದು ಆಗ ಚಂದ್ರ ಹೆಚ್‌ ಸಿ, ಇವರು ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದು ಕಾರು ಮುಳ್ಳಿಕಟ್ಟೆ ಕಡೆಗೆ ಹೋಗಿದ್ದು ಆಗ ಕಾರಿನ ನಂಬ್ರ ನೋಡಲು ಅಸಾಧ್ಯವಾಗಿರುತ್ತದೆ. ಆರೋಪಿತರು ಸಂಘಟಿತರಾಗಿ ಜಾನುವಾರುಗಳನ್ನು ಕಳವು ಮಾಡಿಕೊಂಡು ಅದನ್ನು ವಧೆ ಮಾಡಿ ಮಾಂಸ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಬಿಳಿ ಬಣ್ಣದ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿಯಾಗಿ ನೀಡಿದ ದೂರಿಗೆ ಸಂಬಂಧಿಸಿ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಗಂಗೊಳ್ಳಿ ಠಾಣಾ ಅ ಕ್ರ 81/2025 ಕಲಂ: ಕಲಂ 303(2),112 BNS ಮತ್ತು ಕಲಂ 4,5,12 The Karnataka Prevention of Slaughter and Prevention of cattle Ordiance 2020 and 11(1)(d) Prevention of cruelty animals act 1960 ಮತ್ತು 66(1)ಜೊತೆಗೆ 192(ಎ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣ ಪತ್ತೆ ಮಾಡುವರೇ ಗಂಗೊಳ್ಳಿ ಪೊಲೀಸ್‌ ಠಾಣೆಯಿಂದ ವಿಶೇಷ ತಂಡ ರಚಿಸಿ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ 1) ಮೊಹಮ್ಮದ್‌ ಅನ್ಸಾರ್‌@ಅನ್ಸಾರ್‌ ತೋಡಾರ್‌ ಪ್ರಾಯ:32 ವರ್ಷ ತಂದೆ: ಮೊಹಮ್ಮದ್‌ ಸಲೀಂ ವಾಸ: ಹಮೀಜಾ ಮಂಜಿಲ್‌, ಹಿದಾಯತ್‌ ನಗರ, ಮಿಜಾರ್ ಅಂಚೆ, ತೋಡಾರ ಗ್ರಾಮ ಮೂಡುಬಿದರೆ ತಾಲೂಕು ದ.ಕ ಜಿಲ್ಲೆ ಇತನನ್ನು ದಿನಾಂಕ 07/08/2025 ರಂದು ಬೆಳಿಗ್ಗೆ 06:00 ಗಂಟೆಗೆ ಮಂಗಳೂರಿನ ಕೂಳೂರಿನಲ್ಲಿ ಕೃತ್ಯಕ್ಕೆ ಬಳಸಿದ ಕಾರು ಸಮೇತ ಆಪಾದಿತನನ್ನು ವಶಕ್ಕೆ ಪಡೆದು ದಿನಾಂಕ 07/08/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ರಿ ಆರೋಪಿತನ ಮೇಲೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಒಟ್ಟೂ 13 ಪ್ರಕರಣಗಳು ದಾಖಲಾಗಿರುತ್ತದೆ. ಹಾಗೂ ಇನ್ನೂ ಉಳಿದ 3 ಆರೋಪಿತರನ್ನು ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

 ಸದ್ರಿ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ KA20MB9358 ನಂಬ್ರದ ಬಿಳಿ ಬಣ್ಣದ ಕ್ರೆಟಾ ಕಾರ್ ( ಅಂದಾಜು ಮೌಲ್ಯ 6 ಲಕ್ಷ ರೂಪಾಯಿ) ಹಾಗೂ 1 ಮೊಬೈಲ್‌ ಪೋನ್ ಗಳನ್ನು (ಅಂದಾಜು ಮೌಲ್ಯ 5 ಸಾವಿರ) ಸ್ವಾದೀನಪಡಿಸಿಕೊಳ್ಳಲಾಗಿದೆ.

ಹರಿರಾಮ್‌ ಶಂಕರ್‌ ಮಾನ್ಯ ಪೊಲೀಸ್‌ ಅಧೀಕ್ಷಕರು ಉಡುಪಿ ಜಿಲ್ಲೆ ಸುಧಾಕರ ನಾಯ್ಕ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಂತೆ ಹೆಚ್‌ ಡಿ ಕುಲಕರ್ಣಿ, ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಜಯರಾಮ ಗೌಡ ಪ್ರಭಾರ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನಿರ್ದೇಶನದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಶ್ರೀ ಪವನ್‌ ನಾಯಕ್ (ಕಾ & ಸು), ಶ್ರೀ ಬಸವರಾಜ ಕನಶೆಟ್ಟಿ (ತನಿಖೆ),ಹಾಗೂ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ಚೇತನ್‌, ಶಾಂತರಾಮ ಶೆಟ್ಟಿ, ಸುರೇಶ್, ಸಚಿನ್‌ ಶೆಟ್ಟಿ ,ರಾಜು ಹಾಗೂ ಸಂದೀಪ ಕುರಣಿ, ಪ್ರಸನ್ನ, ರಾಘವೇಂದ್ರ ಪೂಜಾರಿ,ಮಾಳಪ್ಪ ದೇಸಾಯಿ, ಚಿದಾನಂದ ರವರು ಭಾಗಹಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು