Header Ads Widget

ಸೌಂದರ್ಯ ತಜ್ಞೆಯರ ಕಾರ್ಯಗಾರ

ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸೌಂದರ್ಯ ತಜ್ಞೆಯರು ಸೇರಿಕೊಂಡು ಉಡುಪಿಯ ಕಿದಿ ಯೂರಿನ ಅನಂತ ಶಯನ ಸಭಾ ಭವನದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಮಂಗಳ ವಾರದಂದು ಆಯೋಜಿಸಲಾಯಿತು.

ಈ ಕಾರ್ಯಾಗಾರವನ್ನು ಉಡುಪಿಯ ಹಿರಿಯ ಸೌಂದರ್ಯ ತಜ್ಞೆಯರಾದ ಎಡ್ನ ಜತ್ತನ್ನ, ಜಯಶ್ರೀ ಭಂಡಾರಿ ಲತಾ ವಾದಿರಾಜ್, ಶರ್ಲಿ ಅಮ್ಮನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು..

ಕಾರ್ಯಕ್ರದಲ್ಲಿ ಮಂಗಳೂರಿನ ಖ್ಯಾತ ಸೌಂದರ್ಯ ತಜ್ಞ ಮನು ಮುರಳೀಧರ್ ರವರು ಆದುನಿಕ ವಿದಾನದ ಮೇಕಪ್ ಗಳ ಬಗ್ಗೆ ಒಂದು ದಿನ ವಿವರವಾಗಿ ತಿಳಿಸಿ ಕೊಟ್ಟರು .

ಕಾರ್ಯಾಗಾರದಲ್ಲಿ ಉಡುಪಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ 300 ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಪಾಲ್ಕೊಂಡು ಇದರ ಸದುಪಯೋಗವನ್ನು ಪಡೆದರು.ಕಾರ್ಯಕ್ರಮವನ್ನು ರೋಸ್ ಬ್ಯೂಟಿ ಪಾರ್ಲರ್ ಮಾಲಕಿ ಎಡ್ನ ಜತ್ತಣ್ಣ, ಲಕ್ಷ್ಮಿ ಬ್ಯೂಟಿ ವರ್ಲ್ಡ್, ರೋಸ್ ಕಾಸ್ಮೆಟಿಕ್ಸ್ , ಪಟೇಲ ಕುಂದಾಪುರ ಅವರುಗಳು ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದರು..


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು