ಜಿ ಎಸ್ ಬಿ ಮಹಿಳಾ ಸಂಘ ಸಾಹೇಬರಕಟ್ಟೆ ಇದರ ವತಿಯಿಂದ 3ನೇ ವರ್ಷದ ಸಾಮೂಹಿಕ ಶ್ರಾವಣ ಚೂಡಿ ಪೂಜೆಯು ಜಿ ಎಸ್ ಬಿ ಸಭಾಭವನದಲ್ಲಿ ಇಂದು ಜರುಗಿತು.
ಜಿ ಎಸ್ ಬಿ ಮಹಿಳಾ ಸಂಘದ ಅಧ್ಯಕ್ಷೆ ಕಾವ್ಯ ವಿ ಹೆಗ್ಡೆ, ಗೌರವಾಧ್ಯಕ್ಷೆ ಪಲ್ಲವಿ ಮಾಧವ ಹೆಗ್ಡೆ, ಕಾರ್ಯದರ್ಶಿ ಹಾಗೂ ಸರ್ವ ಮಹಿಳಾ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಜಿ ಎಸ್ ಬಿ ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಹಾಗೂ ಜಿ ಎಸ್ ಬಿ ಮಹಿಳಾ ಸಂಘ ಸಾಹೇಬರಕಟ್ಟೆ ಇದರ ವತಿಯಿಂದ ಭಜನೆ, ರಾಮನಾಮ ಜಪ ಮತ್ತು ಪೂಜಾ ಕಾರ್ಯಕ್ರಮ ಜರುಗಿತು.
0 ಕಾಮೆಂಟ್‌ಗಳು