ಉಡುಪಿ :- ಇನಾಯತ್ ಆರ್ಟ್ ಗ್ಯಾಲರಿ ಮತ್ತು ಆರ್ಟ್ ಮೆನ್ಷನ್ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಈ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಅಗಸ್ಟ್ 15ರಂದು ನಡೆಯಿತು.
ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಶಶಿಧರ್ ಶೆಟ್ಟಿ ಧ್ವಜಾರೋಹಣಗೈದು ಸ್ವತಂತ್ರೋತ್ಸವದ ಬಗ್ಗೆ ಸಂದೇಶ ನೀಡಿದರು.
ಹಿರಿಯ ಕೆಎಎಸ್ ಅಧಿಕಾರಿ ಮಹೇಶ್ ಚಂದ್ರ ಮಾತನಾಡಿ ಭಾರತದ ಸ್ವಾತಂತ್ರ್ಯ ತ್ಯಾಗ ಮತ್ತು ಬಲಿದಾನದಿಂದ ಬಂದಿದೆ ಇದನ್ನು ನಾವೆಲ್ಲರೂ ಕೂಡ ಮನಗಂಡು ದೇಶಕ್ಕಾಗಿ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನಾಯತ್ ಆರ್ಟ್ ಗ್ಯಾಲರಿಯ ಸಂಸ್ಥಾಪಕರಾದ ಲಿಯಾಖತ್ ಅಲಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗಿರಿಪ್ರಸಾದ್, ಸದಾನಂದ, ಗೋಪಾಲಕೃಷ್ಣ, ಸ್ವರೂಪ್ ಸಫವಾನ್ ನರಸಿಂಹಮೂರ್ತಿ, ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ ವಂದಿಸಿದರು.
0 ಕಾಮೆಂಟ್‌ಗಳು