Header Ads Widget

ಹೈಕೋರ್ಟ್ ನ್ಯಾಯಮೂರ್ತಿ ಶ್ರೀಮತಿ ಜೆ. ಎಂ. ಖಾಜಿತವರಿಗೆ ಉಡುಪಿ ವಕೀಲರ ಸಂಘದ ನಿಯೋಗದಿಂದ ಅಭಿನಂದನೆ ಸಲ್ಲಿಕೆ

ಉಡುಪಿ ಜಿಲ್ಲೆಯ ನೂತನ ಆಡಳಿತಾತ್ಮಕ ನ್ಯಾಯಮೂರ್ತಿಗಳಾಗಿ ಇತ್ತೀಚೆಗೆ ನೇಮಕಗೊಂಡ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಮತಿ ಜೆ. ಎಂ. ಖಾಜಿ ಇವರನ್ನು ಉಡುಪಿ ವಕೀಲರ ಸಂಘದ ನಿಯೋಗವು ಇಂದು ಆಗಸ್ಟ್ ತಾ. 1ರಂದು ಭೇಟಿಯಾಗಿ ಅವರಿಗೆ ಫುಷ್ಪಗುಚ್ಚ ನೀಡಿ ಅಭಿನಂದಿಸಿತು. ಅಲ್ಲದೆ ಆದಷ್ಟು ಶೀಘ್ರ ಉಡುಪಿ ವಕೀಲರ ಸಂಘಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿತು.

ನಿಯೋಗದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್, ಖಜಾಂಚಿ ಶ್ರೀ ಗಂಗಾಧರ ಎಚ್.ಎಂ., ಹಿರಿಯ ನ್ಯಾಯವಾದಿ ಶ್ರೀ ಜಯಕೃಷ್ಣ ಆಳ್ವ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಪ್ರಜ್ವಲ್ ಶೆಟ್ಟಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು