ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಈ ಬಾರಿ ಆಚರಿಸಲ್ಪಡುವ 57ನೇ ಗಣೇಶೋತ್ಸವದ ಪ್ರಯುಕ್ತ ಮಹಿಳೆಯರಿಗಾಗಿ ಗ್ರಾಮೀಣ ಕ್ರೀಡಾಕೂಟವೂ ಆಗಸ್ಟ್ 17ರಂದು ಸ್ಥಳೀಯ ಶಾಲಾ ಮೈದಾನದಲ್ಲಿ ಜರುಗಿತು.
ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಗರಸಭಾ ಸದಸ್ಯ ವಿಜಯ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಸಾಹಿತಿ ಪೂರ್ಣಿಮಾ ಜನಾರ್ದನ್ ಮಾತನಾಡಿ ಊರಿನ ಮಹಿಳೆಯರನ್ನು ಒಟ್ಟುಗೂಡಿಸಿ ಗ್ರಾಮೀಣ ಭಾಗದ ಹಿಂದಿನ ಕ್ರೀಡೆಗಳಲ್ಲಿಸ್ಪರ್ಧೆ ನಡೆಸುವ ಇಂತ ಕ್ರೀಡಾಕೂಟವು ಸಂಘಟನಾ ಶಕ್ತಿ, ಹಾಗು ಮನೋರಂಜನೆಗಳಿಗೆ ಪೂರಕವಾಗಿ ನಮ್ಮ ಸಂಪ್ರದಾಯ, ಸಂಸ್ಕೃತಿಗಳ ಉಳಿವು ಹಾಗೂ ಬೆಳವಣಿಗೆಗೆ ಕಾರಣವಾಗಬಲ್ಲದು ಎಂದರು. ನಿವೃತ್ತ ಬ್ಯಾಂಕ್ ಉದ್ಯೋಗಿ ರಮೇಶ್ ಶೆಟ್ಟಿ ಮೂಡುಬೆಟ್ಟು, ಸ್ಥಳೀಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಾದಿರಾಜ್ ಟಿ ಸಾಲ್ಯಾನ್, ಉದ್ಯಮಿ ಭಾಸ್ಕರ್ ಪಾಲನ್, ಸಾಮಾಜಿಕ ಮುಂದಾಳು ಶ್ರೀನಿವಾಸ ಬಾಯರಿ,ಕೃಷಿಕ ಎ.ರಾಜ ಸೇರಿಗಾರ್, ಯುವಕ ಸಂಘದ ಅಧ್ಯಕ್ಷ ದೀಪಕ್.ವಿ.ದೇವಾಡಿಗ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಗೌರವಾಧ್ಯಕ್ಷ ಕೃಷ್ಣ ದೇವಾಡಿಗ, ಕೋಶಾಧಿಕಾರಿ ಸಂದೇಶ್ ಕೋಟ್ಯಾನ್, ಹರೀಶ್ ಕೊಡವೂರು, ಪ್ರಸಾದ್ ಶ್ರೀಯಾನ್ ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾದ ಶಿಕ್ಷಕಿ ರತಿದೇವಿಯವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಶೆಟ್ಟಿಗಾರ್ ವಂದಿಸಿದರು.
0 ಕಾಮೆಂಟ್‌ಗಳು