ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಉಡುಪಿಯ ಟ್ರಾಫಿಕ್ ಪೊಲೀಸ್ ಠಾಣೆಗೆ ಧ್ವನಿವರ್ಧಕವನ್ನು ಕೊಡುಗೆ ನೀಡಲಾಗಿದೆ.
ಮೆರವಣಿಗೆ, ಜನನಿಬಿಡ ಸಮಾವೇಶಗಳು ನಡೆಯುವ ಸಂದರ್ಭದಲ್ಲಿನ ಟ್ರಾಫಿಕ್ ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಧ್ವನಿವರ್ಧಕವನ್ನು ನೀಡಲಾಗಿದ್ದು, ಲಯನ್ಸ್ ಕ್ಲಬ್ ಉಡುಪಿ ಸದಸ್ಯ ರೋಶನ್ ಸುಮಿತ್ರ ಹಾಗೂ ಪ್ರಿಮ್ಸಿ ರೋಶನ್ ಸುಮಿತ್ರ ಅವರು ಇದರ ಪ್ರಾಯೋಜಕರಾಗಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, ಜಾಯ್ ಸುಮಿತ್ರ, ಕ್ರಿಸ್ ಸುಮಿತ್ರ, ಟ್ರಾಫಿಕ್ ಠಾಣಾ ಎಎಸ್ಐ ಹರೀಶ್, ಹೆಡ್ ಕಾನ್ಸಟೇಬಲ್ ಸಂತೋಷ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು