Header Ads Widget

ಮಣಿಪಾಲ : ಅಜಾಗರೂಕತೆಯಿಂದ ಕಾರು ಚಲಾಯಿಸುತ್ತಿದ್ದ ಚಾಲಕನ ಬಂಧನ!

ದಿನಾಂಕ:11.08.2025 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಚೆ ಕಛೇರಿ ಎದುರು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ 12ABH59440 ನೇ ಆಕಾಶ ನೀಲಿ ಬಣ್ಣದ ಕಾರನ್ನು ಸಂಪೂರ್ಣ ಟಿಂಟ್‌ ಅಳವಡಿಸಿಕೊಂಡು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಸೂಚನೆಯನ್ನು ಉಲ್ಲಂಘಿಸಿ NH 169 A ರಲ್ಲಿ ಅಡ್ಡಾದಿಡ್ಡಿಯಾಗಿ ಜಿಗ್‌ ಜಾಗ್‌ ಆಗಿ ಚಲಾಯಿಸಿಕೊಂಡು ವಿಪರೀತ ಕರ್ಕಶ ಶಬ್ದ ಮಾಡಿಕೊಂಡು ಹೋಗುವಾಗ ಸದ್ರಿ ಚಾಲಕನು ಯಾವುದೋ ಬೇವಾರೆಂಟು ತಕ್ಷೀರು ಎಸಗುವ ಬಗ್ಗೆ ಅನುಮಾನಗೊಂಡು ಕಾರಿನಲ್ಲಿ ಯಾವುದಾದರೂ ಅಕ್ರಮವಾಗಿ ವಸ್ತುಗಳನ್ನು ಸಾಗಿಸುತ್ತಿವ ಬಗ್ಗೆ ಸಂಶಯಗೊಂಡು ಪಿರ್ಯಾದಿ ವಿವೇಕಾನಂದ ಬಿ ಸಹಾಯಕ ಪೊಲೀಸ್‌ ಉಪ ನಿರೀಕ್ಷಕರು ಮಣಿಪಾಲ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಕಾರನ್ನು ಹಿಂಬಾಲಿಸಿ MIT ಜಂಕ್ಷನ್‌ ಬಳಿ ಕಾರನ್ನು ತಡೆದು ವಶಕ್ಕೆ ಪಡೆದು ಸಾರ್ವಜನಿಕ ಸ್ಥಳದಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿದ 12ABH 59440 ನೇದರ ಕಾರಿನ ಚಾಲಕ ಶೋಹೈಲ್‌ ನೀಲಾಕತ್‌(26) ತಂದೆ:ಮುಸ್ತಾಫ್‌ ವಾಸ:ಕಡಂಗನ್‌ ಕಣ್ಣೂರು ಕೇರಳ ರಾಜ್ಯ ಇತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 143/2025 ಕಲಂ: 281,125,292 BNS ಮತ್ತು IMV Rlue 51 R/W 177 and Rule 100(2) R/W 177 IMV Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು