ವಿಶ್ವ ಹಿರಿಯ ನಾಗರಿಕ ದಿನದ ಪ್ರಯುಕ್ತ, ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆ ವಯೋವೃದ್ಧರ ಆರೋಗ್ಯಕರ ಮತ್ತು ಸಂತೋಷಕರ ಜೀವನಕ್ಕಾಗಿ ವಿನೂತನ ಡೇ-ಕೇರ್ ಆಧಾರಿತ ಪುನಶ್ಚೇತನ (ರಸಾಯನ) ಚಿಕಿತ್ಸಾ ಕರ‍್ಯಕ್ರಮವನ್ನು ಹೆಮ್ಮೆಯಿಂದ ಪ್ರಾರಂಭಿಸುತ್ತಿದೆ.
ಈ ಕಾ ರ‍್ಯಕ್ರಮವನ್ನು ವಿಶ್ವ ಹಿರಿಯ ನಾಗರಿಕರ ದಿನವಾದ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ, ರಸಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ದಿನೇಶ್ ಜೆ ನಾಯಕ್, ಶಿಬಿರದ ಮೇಲ್ವಿಚಾರಕರಾದ ಡಾ.ಪ್ರೀತಿ ಪಾಟೀಲ್, ಆಸ್ಪತ್ರೆಯ ಮೇಲ್ವಿಚಾರಕರಾದ ಡಾ.ಪ್ರಮೋದ್ ಶೇಟ್, ಶಾಲಕ್ಯತಂತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನಿಶಿತಾ ಬಿ ಎಲ್. ಡಾ.ಸಹನಾ, ಶರೀರ ರಚನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನವನೀತ್ ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಸಂಸ್ಥೆಯ ಇತರ ವೈದ್ಯರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಪುನಶ್ಚೇತನ (ರಸಾಯನ) ಚಿಕಿತ್ಸೆಗಳು, ಪಂಚರ‍್ಮ ಚಿಕಿತ್ಸೆಗಳು, ಯೋಗ ಮತ್ತು ಧ್ಯಾನ, ವೈಯಕ್ತಿಕ ಆಹಾರ ಯೋಜನೆಗಳು, ಫಿಸಿಯೋಥೆರಪಿ, ಆರೋಗ್ಯ ಜಾಗೃತಿ ಉಪನ್ಯಾಸ ಲಭ್ಯವಿದ್ದು, ಹಿರಿಯ ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ. ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ ೮೧೨೩೪೦೩೨೩೩ ಅನ್ನು ಸಂಪರ್ಕಿಸಿ
0 ಕಾಮೆಂಟ್‌ಗಳು