ಮಲ್ಪೆ ಶ್ರೀ ರಾಮ ಮಂದಿರ, ಜಿ ಎಸ್ ಬಿ ಸಮಾಜ ಮಲ್ಪೆ ಇಲ್ಲಿನ ಜಿ ಎಸ್ ಬಿ ಮಹಿಳಾ ಮಂಡಳಿ ವತಿಯಿಂದ ಸಾಮೂಹಿಕ ಚೂಡಿ ಪೂಜೆ
ಶ್ರೀ ತುಳಸೀ ಕಟ್ಟೆಯ ಸನ್ನಿಧಾನದಲ್ಲಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ ಅವರ ಮಾರ್ಗದರ್ಶನದಲ್ಲಿ ಪ್ರಕೃತಿಯಲ್ಲಿ ದೊರೆಯುವ ವಿವಿಧ ಬಗೆಯ ಹೂ ಗಳಿಂದ (ಗರಿಕೆ,ರಥ ಪುಷ್ಪಾ, ರತ್ನ ಗಾಂಧೀ, ಸೇವಂತಿಗೆ,) ಇತರೆ ಹೂವನ್ನು ಬಳಿಸಿ ಚೂಡಿ ಕಟ್ಟಿ ಶ್ರಾವಣ ಮಾಸದ ಪ್ರತೀ ಶುಕ್ರವಾರ, ಆದಿತ್ಯವಾರ ಮುತ್ತೈದೆಯರು ಮನೆಯಲ್ಲಿ ಹಾಗೂ ದೇವಳ ದಲ್ಲಿಸಾಮೂಹಿಕವಾಗಿ ಪೂಜೆ ಸಲ್ಲಿಸುವ ಪದ್ಧತಿ.
ವಿಶೇಷತೆ : ಸೂರ್ಯ ದೇವರಿಗೆ, ಪ್ರಕೃತಿಗೆ ಸಲ್ಲಿಸುವ ಪೂಜೆಯಾಗಿದ್ದು, ನೂತನ ವಧು, ಮದುಮಗಳು ಗಂಡನ ಮನೆಯಲ್ಲಿ, ತಾಯಿ ಮನೆಯಲ್ಲಿ ಚೂಡಿ ಪೂಜೆ ಸಲ್ಲಿಸಿ, ಹಿರಿಯ ಮುತ್ತೈದೆಯರಿಗೆ ನೀಡಿ ಆಶೀರ್ವಾದ ಪಡೆದು ಕೊಳ್ಳಬೇಕು. ಹತ್ತಿರದ ಸಂಬಂಧಿಗಳಿಗೆ ಮನೆಗೆ ಹೋಗಿ ಚೂಡಿ ಕೊಟ್ಟು ಬರುತ್ತಾರೆ. ದೂರದ ಊರಿಗೆ ಪೋಸ್ಟ್ ಮಾಡಿ ಆಶೀರ್ವಾದ ಪಡೆದು ಕೊಳ್ಳುತ್ತಾರೆ. ಊರಿನ ದೇವಾಲಯ, ಮಂದಿರಗಳಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿ ಪರಸ್ಪರ ಚೂಡಿ ವಿನಿಮಯ ಮಾಡಿ ಕೊಳ್ಳುತ್ತಾರೆ.
0 ಕಾಮೆಂಟ್‌ಗಳು