ಭಾರತೀಯ ಸ್ಟೇಟ್ ಬ್ಯಾಂಕ್, ಮಲ್ಪೆ ಶಾಖೆಯಿಂದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಗ್ರಾಹಕರಾದ ಮಲ್ಪೆ ಕೋಸ್ಟಲ್ ಸೆಕ್ಯೂರಿಟಿಯ ಸಿಬ್ಬಂದಿ ಶ್ರೀ ಅರ್ಜುನ್ ನೆಲ್ಲೂರು ಅವರಿಗೆ ಸಂಬಂಧಿಸಿದ Rs.40,00,000/- ಅಪಘಾತ ವಿಮೆಯನ್ನು ಅವರ ತಾಯಿಯಾದ ರೇಣುಕ ಶಂಕರಪ್ಪ ನೆಲ್ಲೂರು ಅವರಿಗೆ SBI ರೀಜಿನಲ್ ಆಫೀಸ್ ಉಡುಪಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಪ್ರಕಾಶ್ ಬಿ ಅಡಿಗ ಅವರಿಗೆ ಚೆಕ್ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಸ್ ಬಿ ಐ ನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಶ್ರೀಕೃಷ್ಣರಾಜ ಭಟ್, SBI ಜನರಲ್ ಇನ್ಸೂರೆನ್ಸ್ ಕಂಪನಿಯ ಆದಿತ್ಯ, ಅಕ್ಷಯ್, ಮಲ್ಪೆ ಶಾಖೆಯ ಮ್ಯಾನೇಜರ್ ರಾಜೇಶ್ ಗಂಗೊಳ್ಳಿ ಮತ್ತು ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಅಡಿಗ ಅವರು ಮಾತನಾಡುತ್ತಾ ಬ್ಯಾಂಕಿನ ಎಲ್ಲಾ ಗ್ರಾಹಕರು ತಮಗೆ ಅನುಕೂಲವಾಗುವ ವಿಮೆಯನ್ನು ಬ್ಯಾಂಕಿನ ವ್ಯವಸ್ಥಾಪಕರಲ್ಲಿ ಕೇಳಿ ಮಾಡಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

0 ಕಾಮೆಂಟ್‌ಗಳು