Header Ads Widget

79 ನೇ ಸ್ವಾತಂತ್ರ್ಯೋತ್ಸವ ಮತ್ತು 229ನೇ ರಾಯಣ್ಣ ಜಯಂತ್ಯೋತ್ಸವ

79 ನೇ ಸ್ವಾತಂತ್ರ್ಯೋತ್ಸವ ಮತ್ತು 229ನೇ ರಾಯಣ್ಣ ಜಯಂತ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘ(ರಿ) ಉಡುಪಿಯ ಕಚೇರಿಯಲ್ಲಿ ರಾಯಣ್ಣನ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಲಾಯಿತು. 

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಪ್ರಸನ್ನ ಹಿರೇಮಠ ರಾಯಣ್ಣನಿಗೆ ಪೂಜೆ ಸಲ್ಲಿಸಿ ಮಂಗಲ ಹಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹನುಮಂತ ಎಸ್ ಡೊಳ್ಳಿನ, ಸಂಗೊಳ್ಳಿ ರಾಯಣ್ಣ ಕನಕದಾಸರು ನಮಗೆ ಆರಾಧ್ಯ ದೇವರು ಸಂಗೊಳ್ಳಿ ರಾಯಣ್ಣ ನಮಗೆ ಜೀವನದ ಮಾರ್ಗದರ್ಶಕರು ಯುವಕರು ರಾಯಣ್ಣನ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಗುರುತಿಸುವಂತಹ ವ್ಯಕ್ತಿಗಳಾಗಬೇಕು, ಸಮಾಜಮುಖಿ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು, ಭಕ್ತ ಕನಕದಾಸರಂತಹ ದಾಸ ಶ್ರೇಷ್ಠರು ಸಂಗೊಳ್ಳಿ ರಾಯಣ್ಣರಂತಹ ವೀರಪುರುಷರು ಹಾಲುಮತ ಸಮಾಜದಲ್ಲಿ ಜನಿಸಿದ್ದು ನಮ್ಮ ನಿಮ್ಮೆಲ್ಲರ ಪುಣ್ಯ, ಅವರನ್ನು ಸಮಾಜಕ್ಕೆ ಮಾತ್ರ ಮೀಸಲಾಗಿರಿಸದೆ ಜಗತ್ತಿನಲ್ಲಿಡೆ ಅವರ ಕೀರ್ತಿ ಹಬ್ಬಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಬಸವರಾಜ್ ಕುರುಬರ, ಜಿಲ್ಲಾ ಸಂಘದ ಕಾರ್ಯದರ್ಶಿ ಸಂಗಮೇಶ್ ಆಸಂಗಿ ಮತ್ತು ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು